ಬಸವರಾಜ ಹೊರಟ್ಟಿಗೆ ವಯಸ್ಸಾಗಿದೆ. ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತ ಮನೆಯಲ್ಲಿ ಇರಲಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸ್ಪೀಕರ್ ಬಸವರಾಜ ಹೊರಟ್ಟಿ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಹೊರಟ್ಟಿ, ಸಿದ್ದರಾಮಯ್ಯ ನನಗಿಂದ ದೊಡ್ಡವನು. ನನಗಿಂತ ಒಂದು ವರ್ಷ ಹತ್ತು ತಿಂಗಳು ದೊಡ್ಡವನು. ಅವನ್ಯಾಕೆ ಮೊಮ್ಮಕ್ಕಳನ್ನು ಆಡಿಸುತ್ತ ಮನೆಯಲ್ಲಿ ಕುಳಿತುಕೊಳ್ಳಬಾರದು? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಮೂರು ಮೊಮ್ಮಕ್ಕಳು. ಒಬ್ಬರ ಕಣ್ಣಲ್ಲಿ ಬೊಟ್ಟು ಹಾಕಲು ಹೋದವರು ಮೊದಲು ತಮ್ಮ ಕಣ್ಣು ನೋಡಿಕೊಳ್ಳಬೇಕು ಎಂದರು.
ಹೊರಟ್ಟಿ ರಾತ್ರಿ ಕಂಡ ಬಾವಿಗೆ ಬೀಳಲು ಹೊರಟ್ಟಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಒಬ್ಬೊಬ್ಬರು ಒಂದೊಂದು ಕಡೆ ಬೀಳುತ್ತಾರೆ. ನಾನು 16 ಸಿಎಂಗಳನ್ನು ನೋಡಿದ್ದೇನೆ. 182 ಮಾಜಿ ಮಂತ್ರಿಗಳನ್ನು ನೋಡಿದ್ದೇನೆ ನನಗಿರುವ ಮಾಹಿತಿ ಈ ರಾಜ್ಯದಲ್ಲಿ ಯಾರಿಗೂ ಇಲ್ಲ ಎಂದರು. ವಿಧಾನಸೌಧದಲ್ಲಿ ಎಲ್ಲಿ ಯಾವ ಕಲ್ಲಿದೆ ಎಂಬುದು ಗೊತ್ತಿದೆ. ಎಲ್ಲವನ್ನು ಹೇಳಲು ಸುಧಾರಣೆ ಮಾಡಲು ಆಗುವುದಿಲ್ಲ ಎಂದರು.
ಪಠ್ಯ, ಪುಸ್ತಕದಲ್ಲಿ ಬಸವಣ್ಣನವರ ಚರಿತ್ರೆ ತಿರುಚಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸುಮ್ಮ ಸುಮ್ಮನೆ ಯಾವುದೋ ಕಾರಣಕ್ಕೆ ರಾಜಕಾರಣ ಮಾಡುತ್ತಾರೆ. ಅದು ಸರಿಯಲ್ಲ. ಕೇವಲ ಶಿಕ್ಷಣ ಇಲಾಖೆಗೆ ಅದನ್ನು ಬಿಡಬೇಕು ಎಂದರು.
ಸರ್ವೋದಯ ಶಿಕ್ಷಣ ಸಂಸ್ಥೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರತಿವರ್ಷ ನನ್ನ ಮೇಲೆ ಆರೋಪ ಮಾಡಲಾಗುತ್ತದೆ. ಸಂಸ್ಥೆ ಇನ್ನೆರಡು ವರ್ಷ ಆಗಿದ್ದರೆ ಮುಚ್ಚಿ ಹೋಗುತ್ತಿತ್ತು. ನಾನು ಕೋರ್ಟ್ ಆದೇಶ ಪಾಲಿಸಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/06/2022 06:21 pm