ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರ ಪಿಎಚ್ ನೀರಲಕೇರಿ ಮತಯಾಚನೆ

ಅಣ್ಣಿಗೇರಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಈ ಬಾರಿ ಶಿಕ್ಷಕರು ಮತ ಚಲಾಯಿಸುವ ಮುಖಾಂತರ ಶಿಕ್ಷಕರ ಸಮಸ್ಯೆಗಳ ಬಗೆಹರಿಸಲು ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಶ್ಲೇಷಕರಾದ ಪಿ ಎಚ್ ನೀರಲಕೇರಿಯವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಮೂಲಕ ವಿನಂತಿಸಿಕೊಂಡರು.

ಅನುದಾನರಹಿತ ಅನುದಾನಿತ ಶಿಕ್ಷಕರಿಗಾಗಿ ಪ್ರತ್ಯೇಕ ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದು. ತಾಲೂಕು ಜಿಲ್ಲಾ ರಾಜ್ಯಮಟ್ಟದಲ್ಲಿ ಶಿಕ್ಷಕರ ಸಹಕಾರಿ ಸಂಘ ಸ್ಥಾಪಿಸಿ ಶಿಕ್ಷಕರಿಗೆ ಆರ್ಥಿಕ ಸೌಲಭ್ಯ ಒದಗಿಸುವುದು, ಖಾಸಗಿ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕುಡಿಸುವುದು ಹೀಗೆ ಹಲವಾರು ಯೋಜನೆ ಸಂಕಲ್ಪಗಳನ್ನು ಹೊಂದಿರುವ ಬಸವರಾಜ ಗುರಿಕಾರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವದಿಸಬೇಕೆಂದು ನಿರಲಕೇರಿ ಅವರು ಹೇಳಿದರು.

Edited By :
Kshetra Samachara

Kshetra Samachara

10/06/2022 08:01 am

Cinque Terre

33.78 K

Cinque Terre

0

ಸಂಬಂಧಿತ ಸುದ್ದಿ