ನಾನು ಮೊದಲಿಂದಲೂ ಆರ್.ಎಸ್.ಎಸ್ ವಿರೋಧಿ. ಅವರು ಮಾಡುವ ಕೆಲಸವನ್ನು ನಾನು ವಿರೋಧಿಸುತ್ತೇನೆ. ನನ್ನ ಪ್ರಶ್ನೆಗೆ ಅವರು ಯಾರು ಯಾಕ್ ಉತ್ತರ ನೀಡಲ್ಲ ಅಂದರೆ. ಸತ್ಯವನ್ನು ಅಷ್ಟು ಸುಲಭವಾಗಿ ತಳ್ಳಿಹಾಕೋಕೆ ಆಗಲ್ಲ. ಹೀಗಾಗೇ ಆರ್.ಎಸ್.ಎಸ್ ನವರು ಮಾತನಾಡುತ್ತಿಲ್ಲ. 1920 ರಿಂದ RSS ನಲ್ಲಿ ಯಾರ ಸರಸಂಗ ಸಂಚಾಲಕರು ಯಾರಾಗಿದ್ದಾರೆ. ಇಲ್ಲಿಯವರೆಗೂ ಒಂದೇ ಜಾತಿಯವರಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ವೈ ನಾನೂ ಆಕಸ್ಮಿಕವಾಗಿ ಭೇಟಿಯಾಗಿದ್ದೆವೆ. ಇಬ್ಬರ ಮಧ್ಯೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದರು.
ರಾಜ್ಯಸಭೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ನಾವು ಅಲ್ಪ ಸಂಖ್ಯಾತರಿಗೆ ಸೀಟು ನೀಡಿದ್ದೆವೆ. ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸುವುದೇ ನಮ್ಮ ಗುರಿ. ದೇವೆಗೌಡ್ರು ನಿಂತಾಗ ನಾವು ಅಭ್ಯರ್ಥಿ ಹಾಕಲಿಲ್ಲ. ಅವರು ಗೆಲ್ಲುವ ಸಲುವಾಗಿ ಹಾಗೇ ಮಾಡಿದ್ದೆವು, ಈಗ ಅವರು ಕ್ಯಾಂಡಿಡೆಟ್ ಹಾಕಬಾರದಿತ್ತು. ಕೋಮುವಾದಿ ಬಿಜೆಪಿಯನ್ನು ಸೋಲಿಸುವುದಕ್ಕೆ ನಮ್ಮನ್ನು ಬೆಂಬಲಿಸಬೇಕಿತ್ತು ಎಂದು ಅವರು ಹೇಳಿದರು.
ನಾನು ಒಂದು ಕಲ್ಲಲ್ಲಿ ಎರಡೂ ಹಕ್ಕಿಯನ್ನು ಹೊಡೆದಿಲ್ಲ. ಒಂದು ಹಕ್ಕಿನೂ ಹೊಡೆದಿಲ್ಲ ಎಂದು ಹೆಚ್ ಡಿಕೆ ಮಾತಿಗೆ ತೀರುಗೇಟು ನೀಡಿದ ಸಿದ್ದರಾಮಯ್ಯ, ನಮಗೆ ಬಿಜೆಪಿ-ಜೆಡಿಎಸ್ ಆತ್ಮ ಸಾಕ್ಷಿ ಮತ ಬರುತ್ತವೆ. ನಾವೇ ಮೊದಲು ಅಭ್ಯರ್ಥಿಯನ್ನ ಹಾಕಿದ್ದೆವು. ನಮ್ಮನ್ನ ನೋಡಿ ಅಭ್ಯರ್ಥಿ ಹಾಕಬಾರದಿತ್ತು ಎಂದು ಕಿಡಿಕಾರಿದರು.
ಆರ್.ಎಸ್. ಎಸ್ ಬಗ್ಗೆ ಮತನಾಡಿದ್ರೆ ಸಿದ್ದು ಸುಟ್ಟು ಹೋಗ್ತಾರೆ ಎನ್ನುವ ನಳೀನ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೇ ನೀಡಿದ ಅವರು,ನಾನೇನು ಸುಟ್ಟು ಹೋಗಲ್ಲ ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/06/2022 08:36 pm