ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಹೆಸರು ಹೇಳದೇ ಪರೋಕ್ಷವಾಗಿ ಚುಚ್ಚಿದ್ದಾರೆ.
"ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಆಕಸ್ಮಿಕವಾಗಿ ಮುಖ್ಯಮಂತ್ರಿಯೂ ಆದವನು. ಆದರೆ, ಬೇರೆಯವರ ರೀತಿಯಲ್ಲಿ ದುರಹಂಕಾರ ತೋರಿಸಲಿಲ್ಲ. ಅದೆಂತದ್ದೋ ಪುಕ್ಕಟೆ ಅಕ್ಕಿಯಂತೆ. 5 ಕೆಜಿ ಅಕ್ಕಿಯನ್ನು 10 ಕೆಜಿ ಅಕ್ಕಿ ವಿತರಿಸಿದ್ದೇವೆ ಅಂತಾ ನಾನು ಹೇಳೋದಿಲ್ಲ.
ಈ ನಾಡಿನ ಜನರನ್ನು ಭಿಕಾರಿಯಾಗಿಸುವುದನ್ನು ನಿಲ್ಲಿಸಬೇಕು. ಬದಲಿಗೆ ಜನತೆಗೆ ಸ್ವಂತ ಶಕ್ತಿಯ ದುಡಿಮೆ ಕೊಡಬೇಕಿದೆ. ಮತ್ತೊಬ್ಬರಿಗೆ ಸಹಾಯ ಮಾಡೋ ಶಕ್ತಿ ಕೊಡುವುದು ನನ್ನ ಕಾರ್ಯಕ್ರಮ. ಎಷ್ಟು ದಿನ ಪುಕ್ಕಟೆ ಅಕ್ಕಿ ಕೊಟ್ಟು ಜನರನ್ನು ಅದೇ ಜಾಗದಲ್ಲಿ ಇಡುತ್ತೀರಿ? ಜನರನ್ನು ಆರ್ಥಿಕವಾಗಿ, ಸ್ವಾವಲಂಬಿಗಳಾಗಿ ಬೆಳೆಸಿ" ಎಂದು ಹರಿಹಾಯ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/06/2022 10:24 am