ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಬಸವರಾಜ ಹೊರಟ್ಟಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಇವತ್ತು ಬಸವರಾಜ ಹೊರಟ್ಟಿ ಪಕ್ಷ ಬಿಟ್ಟು ಹೋಗಿದ್ದಾರೆ ನಿಜ. ಆದರೆ, ಅವರಿಗೆ ಫಲಿತಾಂಶ ಬರಬೇಕಲ್ಲ? ಶಿಕ್ಷಕರು ಮನಸ್ಸು ಮಾಡಿದರೆ ಜೆಡಿಎಸ್ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದರು.
ಹೊರಟ್ಟಿ ಅವರು ಶಿಕ್ಷಕರ ಕ್ಷೇತ್ರದಿಂದ ಗೆದ್ದು, ಸ್ಪೀಕರ್ ಆಗಿದ್ದಂತವರು ಅವರೇ ಈ ಉಪನ್ಯಾಸಕರ ಪ್ರತಿಭಟನೆ ನಿಲ್ಲಿಸಬೇಕಿತ್ತು. ಶಿಕ್ಷಕರ ಸಮಸ್ಯೆಗಳನ್ನು ಅವರು ಬಗೆಹರಿಸಬಹುದಿತ್ತು ಎಂದರು.
ಪಕ್ಷ ಬಿಟ್ಟು ಹೋಗುತ್ತೇನೆ ಎಂದವರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳೋಕಾಗುತ್ತಾ? ನಾನು ವೈಯಕ್ತಿಕವಾಗಿ ಯಾರದೇ ಭವಿಷ್ಯ ಹಾಳಾಗಲಿ ಅಂತಾ ಬಯಸಿದವನಲ್ಲ. ಜೆಡಿಎಸ್‌ನಲ್ಲಿದ್ದಿದ್ದರೆ ನನ್ನ ಭವಿಷ್ಯ ಹಾಳಾಗುತ್ತಿತ್ತು ಎಂಬ ಭಾವನೆ ಅವರದಲ್ಲಿದೆ. ಮುಂದೆ ಅವರಿಗೆ ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆಯಾ ಎಂಬುದನ್ನು ಕಾದು ನೋಡೋಣ ಎಂದರು.
Kshetra Samachara
04/06/2022 06:13 pm