ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜ್ಯಸಭೆಯ ಫಲಿತಾಂಶದ ನಂತರ ಯಾರು ಬಿಜೆಪಿ ಬಿ ಟೀಮ್ ಅಂತ ಗೊತ್ತಾಗುತ್ತೆ: ಹೆಚ್‌ಡಿಕೆ

ಹುಬ್ಬಳ್ಳಿ: ಈವರೆಗೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಲಾಗುತ್ತಿತ್ತು. ಆದರೆ ಬರುವ ರಾಜ್ಯಸಭೆಯ ಫಲಿತಾಂಶದ ನಂತರ ಯಾರು ಬಿಜೆಪಿಯ ಬಿ ಟೀಮ್ ಹಾಗೂ ನಾಯಕ ಯಾರೆಂದು ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರನ್ನು ಸೋಲಿಸಬೇಕೆಂಬುದು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬಿಟ್ಟಿದ್ದು. ಆಗ ನಿಜವಾದ ವಾಸ್ತವ ನಾಡಿನ ಜನತೆಗೆ ಗೊತ್ತಾಗುತ್ತದೆ. ಗೆದ್ದರೆ ಶಕ್ತಿ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ಸೋತರೆ ಮತ್ತೊಂದು ರಾಜಕೀಯವಾಗಿ ಅಸ್ತ್ರವಾಗುತ್ತದೆ ಎಂದರು.

ನನ್ನ ಗುರಿ ಮುಂಬರುವ 2023 ರ ವಿಧಾನಸಭೆ ಚುನಾವಣೆ. ಅದಕ್ಕಾಗಿ ಜಲಧಾರೆ ಮತ್ತು ಪಂಚರತ್ನ ರಥಯಾತ್ರೆಗೆ ಸಿದ್ಧತೆ ನಡೆಸಿದ್ದೇನೆ. ಇವೆರಡೂ ಕಾರ್ಯಕ್ರಮ ಬಳಸಿಕೊಂಡು ಮತದಾರರಿಗೆ ಮನವರಿಕೆ ಮಾಡುವ ಕೆಲಸ ಮಾಡಲಾಗುವುದು. ಈ 10 ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿ 123 ಸೀಟ್ ಗೆಲ್ಲಲು ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Edited By :
Kshetra Samachara

Kshetra Samachara

04/06/2022 01:24 pm

Cinque Terre

19.07 K

Cinque Terre

0

ಸಂಬಂಧಿತ ಸುದ್ದಿ