ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಧಾರವಾಡ ಜಿಲ್ಲೆಯ ಚುನಾವಣೆ ತನ್ನದೇ ಆದ ಮಹತ್ವವಿದೆ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾತ್ರ ವಿಧಾನಸಭಾ ಚುನಾವಣೆ ಈಗಾಗಲೇ ಚುರುಕುಗೊಂಡಿದ್ದು, ಸೆಂಟ್ರಲ್ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ತಯಾರಿ ನಡೆಸಿದ್ದು,ಕೇದಾರನಾಥನ ರುದ್ರಾಕ್ಷಿ, ಬದ್ರಿನಾಥನ ತುಳಸಿ ಪಡೆದು ಚುನಾವಣೆಗೆ ರಜತ್ ಉಳ್ಳಾಗಡ್ಡಿಮಠ ರೆಡಿ ಆಗಿದ್ದಾರೆ.
ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡು ನೊಂದವರ ಕಣ್ಣೀರು ಒರೆಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ರಜತ್ ಈಗ ಟೆಂಪಲ್ ರನ್ ಆರಂಭ ಮಾಡಿದ್ದು, ಕೇದಾರನಾಥನ ರುದ್ರಾಕ್ಷಿ, ಬದ್ರಿನಾಥನ ತುಳಸಿ ಪಡೆದು ಚುನಾವಣೆಗೆ ರಜತ್ ರೆಡಿ ಆಗಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕನಸನ್ನು ಹೊತ್ತಿರುವ ರಜತ್ ತಮ್ಮ ಬಾಲ್ಯದಿಂದಲೇ ರಾಜಕೀಯ ಅನುಭವ ಪಡೆದಿದ್ದಾರೆ. ಅಲ್ಲದೇ ಹಿರಿಯ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿರುವ ಉಳ್ಳಾಗಡ್ಡಿಮಠ ಈಗಾಗಲೇ ಗ್ರೌಂಡ್ ವರ್ಕ್ ಆರಂಭ ಮಾಡಿದ್ದು, ಚುನಾವಣೆಯ ಗೆಲುವಿಗೆ ದೇವರ ಆಶೀರ್ವಾದ, ಗುರುಗಳ ಶ್ರೀರಕ್ಷೆಗಾಗಿ ಸಾಕಷ್ಟು ಧಾರ್ಮಿಕ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನೂ ಚುನಾವಣೆಗೆ ತಯಾರಿ ನಡೆಸುವ ಹಿನ್ನೆಲೆಯಲ್ಲಿ ಶ್ರೀಮದ್ ಹೀಮವತ್ಕೇದಾರ ವೈರಾಗ್ಯ ಸಿಂಹಾಸನಾಧಿಶ್ವರ ಶ್ರೀ ಶ್ರೀ ಶ್ರೀ 1008 ರಾವಲ್ ಪದವಿ ವಿಭೂಷಿತ ಜಗದ್ಗುರು ಭೀಮಾಶಂಕರಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಜನ್ಮ ದಿನೋತ್ಸವಕ್ಕೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು ಉತ್ತರಾಖಂಡದ ಕೇದಾರ ಪೇಠದ ಉಕ್ಕಿಮಠಕೆ ಭೇಟಿ ಕೊಟ್ಟು ಸನ್ನಿದಿಯವರ ಚರಣ ಕಮಲಗಳಿಗೆ ನಮಸಿ ಶ್ರೀರಕ್ಷೆ ಪಡೆದುಕೊಂಡು ಚುನಾವಣೆ ಅಖಾಡಕ್ಕೆ ತಯಾರಾಗಿದ್ದಾರೆ. ಬದರಿನಾಥ ಧಾಮದ ಪ್ರಮುಖ ಅರ್ಚಕರಾದ ರಾವಲ್ ಶ್ರೀ ಈಶ್ವರಪ್ರಸಾದ್ ನಂಬೂತಿರಿ ಅವರು ಭಗವಾನ್ ನಾರಾಯಣ ದೇವರಿಗೆ ಅರ್ಪಿಸಿದ ವಸ್ತ್ರ, ಚಂದನ ಕೇಸರಿ ನೀಡಿ ಆಶೀರ್ವಾದಿಸಿದ್ದಾರೆ. ಅಲ್ಲದೇ ಈ ಹಿಂದೆ ಹುಬ್ಬಳ್ಳಿಗೆ ಕೇದಾರ ಜಗದ್ಗುರುಗಳನ ಕರಿಯಿಸಿ ಸನಾತನ ಧರ್ಮಸಭೆ ನಡೆಸಿದ್ದು ಸ್ಮರಣೀಯವಾಗಿದೆ.
ಈಗಾಗಲೇ ಜನರ ಕಷ್ಟ ಸುಖದಲ್ಲಿ ಭಾಗಿಯಾಗಿ ಸಾಕಷ್ಟು ಕಾರ್ಯಗಳ ಮೂಲಕ ಮನೆಯ ಮಗನಂತೆ ಗುರುತಿಸಿಕೊಂಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಅರ್ಥಿಕ್ ಸಂಕಷ್ಟಕ್ಕೆ ಸಿಲುಕಿದ ಬಡ ವೃತ್ತಿಪರ ಕಾರ್ಮಿಕರು ಮತ್ತು ಕರೋನಾ ಯೋಧರಿಗೆ ರಜತ್ ಸಂಭ್ರಮ ಹೆಸರಿನ ಸನ್ಮಾನ ಮಾಡುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ನಿಭಾಯಿಸಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ರಜತ್ ಅವರು ಟೆಂಪಲ್ ರನ್ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ಹೊಸ ಅಡಿಪಾಯ ಹಾಕಲು ಮುಂದಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/06/2022 07:07 pm