ಹುಬ್ಬಳ್ಳಿ: ಮಸೀದಿ, ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ಸ್ಪೀಕರ್ ಬಳಕೆ ವಿಚಾರದಲ್ಲಿ ಸರ್ಕಾರಕ್ಕೆ ನೀಡಿದ ಡೆಡ್ ಲೈನ್ ಕೊನೆಯಾಗಿದ್ದು, ಜೂನ್ 8 ರಿಂದ ಬಿಜೆಪಿಯ ಶಾಸಕರ ಕಚೇರಿ, ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ ನಿರ್ಬಂಧ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಪ್ರಕಟಿಸಬೇಕು. ಮೈಕ್ ಬಳಸಲು ಧಾರ್ಮಿಕ ಕೇಂದ್ರಗಳು ಅನುಮತಿ ಪಡೆಯಬೇಕು. ರಾತ್ರಿ 10 ಗಂಟೆ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಯಮ ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಹದಿನೈದು ದಿನಗಳ ಗಡವು ನೀಡಿತ್ತು. ಆದರೆ ಈವರೆಗೆ ಯಾವುದೇ ನಿಯಮಗಳು ಜಾರಿಯಾಗಿಲ್ಲ. ಸರ್ಕಾರದ ಸುತ್ತೋಲೆ ಕಸದ ಬುಟ್ಟಿಗೆ ಸೇರಿವೆ ಹೀಗಾಗಿ ಶ್ರೀರಾಮ ಸೇನೆ ಸೇರಿದಂತೆ ಹತ್ತಕ್ಕಿಂತ ಹೆಚ್ಚು ಹಿಂದೂಪರ ಸಂಘಟನೆಗಳ ಸಹಯೋಗದಲ್ಲಿ ಮೈಕ್ ತೆರವಿನ ಹೋರಾಟ ಮುಂದುವರಿಸಲಾಗುತ್ತಿದೆ ಎಂದು ಮುತಾಲಿಕ್ ತಿಳಿಸಿದರು.
ಬಿಜೆಪಿ ಜಯಗಳಿಸಿದ್ದೆ ಹಿಂದೂಗಳಿಂದ ಆದರೆ ಹಿಂದೂಗಳು ನಿರಂತರವಾಗಿ ಹೋರಾಟ ಮಾಡುತ್ತಾ ಬರಲಾಗುತ್ತಿದ್ದರೂ ಯಾಕೆ ಕಿವಿ ಮುಚ್ಚಿಕುಳಿತುಕೊಂಡಿದ್ದಾರೆ. ಸರ್ಕಾರ ಜೂನ್ 8 ರೊಳಗೆ ಈಗಾಗಲೇ ಹೊರಡಿಸಿದ ಸುತ್ತೋಲೆಯನ್ನು ಜಾರಿಗೊಳಿಸಬೇಕು. ಇಲ್ಲದೇ ಹೋದರೆ ಹೋರಾಟ ಅನಿವಾರ್ಯ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
Kshetra Samachara
02/06/2022 02:09 pm