ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ವಿಧಾನ ಪರಿಷತ್‌ಗೆ ಈ ಸಾರಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ'

ಧಾರವಾಡ: ವಿಧಾನ ಪರಿಷತ್‌ಗೆ ನಾಮನಿರ್ದೇಶನ ಸದಸ್ಯರ ಆಯ್ಕೆಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು. ಉತ್ತರ ಕರ್ನಾಟಕಕ್ಕೆ ಹಿಂದಿನಿಂದ ಕೇಳುತ್ತ ಬಂದಿದ್ದೇವೆ. ಅನೇಕ ಸಲ ಒತ್ತಾಯ, ವಿನಂತಿ ಮಾಡಿಕೊಂಡಿದ್ದೇವೆ. ಕೆಪಿಸಿಸಿ ಮತ್ತು ಕೇಂದ್ರಮಟ್ಟದ ಕಾಂಗ್ರೆಸ್ ಸಮಿತಿ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಬೇಡಿಕೆ ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಿಂದ ದಾವಣಗೆರೆವರೆಗೆ ಸದ್ಯ ಅಲ್ಪಸಂಖ್ಯಾತರ ಜನಪ್ರತಿನಿಧಿ ಇಲ್ಲ. ಅದ್ದರಿಂದ ಈ ಸಾರಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು. ಸಲೀಂ ಅಹ್ಮದ್‌ರನ್ನು ಕೆಪಿಸಿಸಿಯಿಂದಲೇ ಆಯ್ಕೆ ಮಾಡಿದ್ದು, ಹೀಗಾಗಿ ಸ್ಥಳೀಯವಾಗಿ ಎಂಎಲ್‌ಸಿಯಲ್ಲಿ ಓರ್ವರಿಗೆ ಅವಕಾಶ ನೀಡಬೇಕು. ಯಾಕೆಂದರೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ, ಗದಗ, ಧಾರವಾಡದಲ್ಲಿ ನಮ್ಮವರು ಜನಪ್ರತಿನಿಧಿ ಇಲ್ಲ. ಈಗ ಸಮಯ ಬಂದಿದೆ, ವಿಧಾನ ಪರಿಷತ್‌ಗೆ ನಮ್ಮಲ್ಲಿಯ ಒಬ್ಬರನ್ನು ನಾಮನಿರ್ದೇಶನ ಮಾಡಬೇಕು ಎಂದರು.

Edited By :
Kshetra Samachara

Kshetra Samachara

15/05/2022 07:17 pm

Cinque Terre

24.01 K

Cinque Terre

1

ಸಂಬಂಧಿತ ಸುದ್ದಿ