ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಿಎಸ್ಐ ಅಕ್ರಮದಲ್ಲಿ 'ಕೈ' ನಾಯಕರ ಕೈವಾಡ; ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಕಾಂಗ್ರೆಸ್ಸಿನವರೇ ತನಿಖಾ ಸಂಸ್ಥೆಗಳಿಂದ ತನಿಖೆ ಬೇಡ ನ್ಯಾಯಾಂಗ ತನಿಖೆ ಬೇಕು ಎನ್ನುತ್ತಿದ್ದಾರೆ. ಇದರಿಂದ ಅವರು ಕೂಡ ಸಕ್ರೀಯವಾಗಿ ಭಾಗವಹಿಸಿರುವುದು ಗೊತ್ತಾಗುತ್ತದೆ. ನ್ಯಾಯಂಗ ತನಿಖೆಯಾದರೇ ಯಾರು ಜೈಲಿಗೆ ಹೋಗಲ್ಲ ಸುಮ್ಮನೆ ಎಲ್ಲರೂ ಕಾಲಹರಣ ಮಾಡಿದ್ರಾಯಿತು ಅಂತ‌ ಅಂದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಿಎಸ್ಐ ಅವ್ಯವಹಾರದ ಕುರಿತು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ನಗರದಲ್ಲಿಂದು ಬಿಜೆಪಿ ಕಾರ್ಯಕಾರಣಿ ಸಭೆಗೆ ಆಗಮಿಸಿದ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಮನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅವರ ಸಹೋದರ ಇರುತ್ತಿದ್ದರು. ಯಾಕೆ ಅವರು ನೋಟೀಸ್ ನೀಡಿದ್ದರೂ ಉತ್ತರ ನೀಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಸಿಐಡಿ ನೋಟೀಸ್ ನೀಡಿದರು ಅಟೆಂಡ್ ಆಗ್ತಿಲ್ಲ. ಅವರ ಹತ್ತಿರ ಮಾಹಿತಿ ಇದ್ದರೆ ಅದನ್ನು ಜವಾಬ್ದಾರಿ ವ್ಯಕ್ತಿಯಾಗಿ ನೀಡೋದು ಅವರ ಕರ್ತವ್ಯ. ಈಗ ಅವ್ಯವಹಾರದಲ್ಲಿ ಕಾಂಗ್ರೆಸ್ ಶಾಮೀಲ್ ಇದೆ ಎಂಬುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳಿಂದ ಕಾಂಗ್ರೆಸ್ ನಾಯಕರು ತನಿಖೆ ಬೇಡ ಎನ್ನುತ್ತಿದ್ದಾರೆ ಎಂದು ದೂರಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/05/2022 09:09 pm

Cinque Terre

132.6 K

Cinque Terre

16

ಸಂಬಂಧಿತ ಸುದ್ದಿ