ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಎಲ್ಲೆಡೆ ಜನರ ಮಹಾಪೂರ ಜನತಾ ಜಲಧಾರೆ ಜಲಯಾತ್ರೆ ಪೂರ್ಣ

ಕುಂದಗೋಳ: ಕಳಸ, ಗುಡಗೇರಿ, ಪಶುಪತಿಹಾಳ, ಸಂಶಿ, ಕುಂದಗೋಳ, ಶರೇವಾಡ, ನೂಲ್ವಿ ಸೇರಿದಂತೆ ಕುಂದಗೋಳ ತಾಲೂಕಿನ ಪ್ರಮುಖ ಹಳ್ಳಿಗಳ ಮೇಲೆ ಸಂಚರಿಸಿದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್'ಅಲಿ ಜೋಡಮನಿ ನೇತೃತ್ವದ ಜಲಯಾತ್ರೆ ಉರಿ ಬಿಸಿಲಿನಲ್ಲೂ ಜಲ ಜಾಗೃತಿ ಮೂಡಿಸಿತು.

ಸಂಶಿ ಗ್ರಾಮದ ಫಕೀರಶ್ವರನಿಗೆ ಪೂಜೆ ಸಲ್ಲಿಸಿ ಎರಡನೇ ದಿನ ಆರಂಭವಾದ ಜನತಾ ಜಲಧಾರೆ ರೈತರ ಜೀವನಾಡಿ ಬೆಣ್ಣೆ ಹಳ್ಳಕ್ಕೆ ವಿಶೇಷ ಪೂಜೆ ಸಲ್ಲಿಸಿ ಪೂರ್ಣ ಕುಂಭಗಳನ್ನು ಹಳ್ಳದಲ್ಲಿ ತುಂಬಿ ಬೆಣ್ಣೆ ಹಳ್ಳದ ಪ್ರವಾಹ ನಿಯಂತ್ರಣದ ಪ್ರಾರ್ಥನೆ ಜಲಧಾರೆಯ ವೈಶಿಷ್ಟ್ಯ ಬಿಂಬಿಸಿತು.

ಸಾಮಾನ್ಯರಲ್ಲಿ ಸಾಮಾನ್ಯ, ಸಣ್ಣವರಲ್ಲಿ ಅತಿ ಸಣ್ಣವನಾಗಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್'ಅಲಿ ಜನತಾ ಜಲಧಾರೆ ಜಲಯಾತ್ರೆ ಕರಪತ್ರ ಹಿಡಿದು ಮನೆ, ಅಂಗಳ, ಕಟ್ಟೆ, ದೇವಸ್ಥಾನ ಹಾದಿ ಬೀದಿಗಳಲ್ಲಿದ್ದವರಿಗೆ ಮಾಹಿತಿ ಹಂಚಿ ಕುಂದಗೋಳ ಮತಕ್ಷೇತ್ರದ ಸೇವಕ ಎಂಬ ಮಾತನ್ನು ಅಕ್ಷರಶಃ ಸಾಬೀತು ಮಾಡಿದರು.

ಸಂಶಿ ಗ್ರಾಮಕ್ಕೆ ಜಲಯಾತ್ರೆ ಆಗಮಿಸಿದ ವೇಳೆ ಜೋಡಮನಿ ಅವರು ತಂದೆ ಅಲ್ಲಿಸಾಬ್ ತಾಯಿ ಬೀಬಿಜಾನ್ ಅವರ ಆಶೀರ್ವಾದಪಡೆದಿದ್ದು, ಮನುಷ್ಯ ಆರ್ಥಿಕ ಸಾಮಾಜಿಕವಾಗಿ ಎಷ್ಟೇ ಬಲಿಷ್ಠನಾದರೂ ತಂದೆ ತಾಯಿಗಳ ಪಾಲಿಗೆ ಮಗ ಮಾತ್ರ ಎಂಬ ಕೃತಜ್ಞತಾ ಭಾವ ತೋರಿತು ನೋಡುರಗರಿಗೆ ಹೃದಯಸ್ಪರ್ಶಿ ಮಾರ್ಗದರ್ಶಿ ಎನಿಸಿತು.

ಒಂದು ನೂರಕ್ಕೂ ಅಧಿಕ ಪೂರ್ಣ ಕುಂಭ ಕೊಡಗಳ ಹೊತ್ತ ಮಹಿಳೆಯರು, ಜಾನಪದ ಸೊಗಡಿನ ಮಹಿಳೆಯರ ಡೊಳ್ಳಿನ ತಂಡ ಭತ್ತದ ಹೊರೆ ಹೊತ್ತ ಮಹಿಳೆಯ ಚಿಹ್ನೆ ಜನತಾ ಜಲಧಾರೆ ಮಹಿಳೆಯರ ಪ್ರಾಧಾನ್ಯತೆ ತೋರಿ, ತಾಲೂಕಿನಲ್ಲೇ ಅತಿ ಹೆಚ್ಚು ಪ್ರಯಾಣ ಬೆಳೆಸಿದ ಚುನಾವಣೆ ಪೂರ್ವ, ನಿಷ್ಪಕ್ಷಪಾತ, ರೈತಾಪಿ ಜನರ ಏಳ್ಗೆಯ, ಜೀವ ಜಲ ಧಾರೆಯ ಧ್ಯೇಯೋದ್ದೇಶದ ಯಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಒಟ್ಟಾರೆ 2022ರ ಏಪ್ರೀಲ್ 29 ಮತ್ತು 30 ಕುಂದಗೋಳ ಮತಕ್ಷೇತ್ರದ ಜನತಾ ಜಲಧಾರೆ ಜಲಯಾತ್ರೆಯ ಹಬ್ಬದ ಸುದಿನ ಎಂಬಂತೆ ಗ್ರಾಮ ಗ್ರಾಮಗಳಲ್ಲಿ ಜನತಾ ಜಲಧಾರೆ ಜಲಯಾತ್ರೆ ಸೊಬಗಿನ ಸುಂದರ ನೋಟ ಕಂಡು ಬಂದಿತು.

Edited By : Manjunath H D
Kshetra Samachara

Kshetra Samachara

05/05/2022 09:16 pm

Cinque Terre

87.71 K

Cinque Terre

0

ಸಂಬಂಧಿತ ಸುದ್ದಿ