ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಿಗೆ ಸೋಲಿನ ನಂತರ ನಿದ್ರಾಹೀನತೆ ಕಾಡುತ್ತಿದೆ: ಟೆಂಗಿನಕಾಯಿ ವಾಗ್ದಾಳಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಐದು ರಾಜ್ಯಗಳಲ್ಲಿ ಸೋತ ನಂತರ ಅವರಿಗೆ ನಿದ್ರಾಹೀನತೆ ಕಾಡುತ್ತಿದೆ. ಸಿದ್ದರಾಮಯ್ಯ ಹಿಟ್ ಆ್ಯಂಡ್ ರನ್ ಆರೋಪ ಮಾಡ್ತಿದ್ದಾರೆ. ಅವರ ಅವಧಿಯಲ್ಲಿ ಕೆಪಿಸ್‌ಸಿ ಸಾಕಷ್ಟು ಹಗರಣ ಆಗಿವೆ. ಪ್ರಿಯಾಂಕ್ ಖರ್ಗೆ ಆರೋಪ ಮಾಡ್ತಾರೆ. ಆದರೆ ಸಿಐಡಿ ಮೂರು ನೋಟಿಸ್ ನೀಡಿದರೂ ಉತ್ತರ ನೀಡ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತ ನಂತರ ಅವರಿಗೆ ನಿದ್ರಾಹೀನತೆ ಕಾಡುತ್ತಿದೆ. ಮಾಡಲು ಕೆಲಸವಿಲ್ಲದೇ ಕಾಂಗ್ರೆಸ್ ಮೈ ಪರಚಿಕೊಳ್ಳುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಶಾಸಕ ಬಸನಗೌಡ ಯತ್ನಾಳ್ ಪಾಟೀಲ ಹೇಳಿಕೆ ಕುರಿತು ಮಾತನಾಡಿದ ಅವರು, ಯತ್ನಾಳ ಕೇವಲ ಹೇಳಿಕೆ ನೀಡಿದ್ದಾರೆ. ಆದರೆ ಖರ್ಗೆಯವರು ವಿಶೇಷ ಆಸಕ್ತಿ ತೋರಿಸಿದ್ದರು. ಸಾಲು ಸಾಲು ಹಗರಣ ಮಾಡಿರುವ ಕೈ ನಾಯಕರಿಂದ ಭ್ರಷ್ಟಾಚಾರ ಪಾಠ ಕಲಿಯುವ ಅಗತ್ಯ ಬಿಜೆಪಿಗಿಲ್ಲ. ಅರ್ಕಾವತಿ ಡಿನೋಟಿಫಿಕೆಷನ್‌ನಲ್ಲಿ 5 ಸಾವಿರ ಕೋಟಿ ಹಗರಣ ಆಗಿದೆ. ನಾವು ಸಿದ್ದರಾಮಯ್ಯ ವಿರುದ್ದ ಎಸಿಬಿಗೆ 110 ಕೇಸ್ ನೀಡಿದ್ದರೂ ಅವೆಲ್ಲಾ ಏನ್ ಆಗಿವೆ ಎನ್ನೋದು ಗೊತ್ತಾಗಿದೆ ಎಂದು ಕಿಡಿ ಕಾರಿದರು.

ಬಿಜೆಪಿ 40 ಪರ್ಸೆಂಟ್ ಕಮೀಷನ್ ಹಾಗೂ ಪಿಎಸ್‌ಐ ಹಗರಣದ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತದೆ. ಈ ಬಗ್ಗೆ ಜನರರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

05/05/2022 04:23 pm

Cinque Terre

41.96 K

Cinque Terre

10

ಸಂಬಂಧಿತ ಸುದ್ದಿ