ಅಳ್ನಾವರ: ಕಲಘಟಗಿ ಮತ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಸಾಕಷ್ಟು ಗೊಂದಲವಿದ್ದರೂ ನಾನೇ ಅಭ್ಯರ್ಥಿ, ನನಗೆ ಟಿಕೆಟ್ ಎಂದು ಪುನರುಚ್ಚರಿಸುವ ಮೂಲಕ ಮಾಜಿ ಸಚಿವ ಸಂತೋಷ ಲಾಡ್, ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ನಾಗರಾಜ್ ಛಬ್ಬಿ ಅವರಿಗೆ ಟಾಂಗ್ ನೀಡದ್ದಾರೆ.
ಕಲಘಟಗಿಯಿಂದ ನಾನೇ ಸ್ಪರ್ಧಿಸುತ್ತೆನೆ ಎಂದು ಹೇಳುವ ಹೇಳಿ ನಾಗರಾಜ್ ಛಬ್ಬಿ ಅವರ ಬೆಂಬಲಿಗರಿಗೆ ಸ್ಪಷ್ಟ ಸಂದೇಶ ರವಾನಿಸುವ ಪ್ರಯತ್ನ ಲಾಡ್ ಮಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಲಘಟಗಿ ಮತ್ತು ಅಳ್ನಾವರ ಜನತೆಗೆ ನಮ್ಮ ಕಾರ್ಯಕ್ರಮಗಳ ಬಗ್ಗೆ ಹಾಗೂ ನಮ್ಮ ಕೆಲಸದ ಬಗ್ಗೆ ಗೊತ್ತಿದೆ.ನಮ್ಮ ಅಧಿಕಾರ ಇಲ್ಲದಿದ್ದರೂ ಸಹ ಕಳೆದ 3 ವರ್ಷಗಳಿಂದ ಕಲಘಟಗಿ ಮತ್ತು ಅಳ್ನಾವರ ಜನತೆ ಸೇವೆ ಮಾಡುತ್ತಲೇ ಬಂದಿದ್ದೇನೆ.
ಬರುವ ಚುನಾವಣೆಯಲ್ಲಿ ನನಗೆ ಟಿಕೆಟ್ ಖಚಿತ. ಇನ್ನು ಕಾಂಗ್ರೆಸ್ ಹೈ ಕಮಾಂಡ ಘೋಷಿಸುವುದೊಂದೆ ಬಾಕಿ. ಚನಾವಣೆ 2-3 ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಯಾರಿಗೆ ಎಂದು ತಿಳಿಯುತ್ತದೆ ಅಧಿಕೃತವಾಗಿ ಘೋಷಣೆಯಾಗುತ್ತದೆ ಎಂದು ವಿಶ್ಷಾಸದಿಂದ ಹೇಳಿದರು.
Kshetra Samachara
02/05/2022 01:01 pm