ಕುಂದಗೋಳ: ಜೆಡಿಎಸ್ ಪಕ್ಷದ ಜನತಾ ಜಲಧಾರೆ ಯಾತ್ರೆ ಇಂದು ಕಳಸ ಗ್ರಾಮದಿಂದ ಕುಂದಗೋಳ ಮತಕ್ಷೇತ್ರದ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಹಜರತ್‌ಅಲಿ ಜೋಡಮನಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಪ್ರಾರಂಭವಾಯಿತು.
ಡೊಳ್ಳು ಮೇಳಗಳ ಸದ್ದು, ಜಲಯಾತ್ರೆಗೆ ಇಂಬು ನೀಡಿದ ಕುಂಭ ಕೊಡಗಳ ಹೊತ್ತ ವನಿತೆಯರ ಸಾಲಿನ ನಡುವೆ ಜನತಾ ಜಲಧಾರೆ ಜಲಯಾತ್ರೆ ಕಳಸ ಗ್ರಾಮದಿಂದ ಆರಂಭಕಂಡು ಗುಡಗೇರಿ, ಪಶುಪತಿಹಾಳ ಮಾರ್ಗವಾಗಿ ಚಲಿಸುತ್ತಾ ಇಂದು ಸಂಶಿ ಗ್ರಾಮ ತಲುಪಿದ್ದು ನಾಳೆ ಸಂಶಿ ಗ್ರಾಮದಿಂದ ರಥಯಾತ್ರೆ ಶಿರೂರು ಕುಂದಗೋಳ ಮಾರ್ಗವಾಗಿ ಮುಂದುವರೆಯಲಿದೆ.
ಜೆಡಿಎಸ್ ಜನತಾ ಜಲಧಾರೆ ಜಲಯಾತ್ರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಜೊತೆ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹಾಗೂ ಮುಖಂಡ ತುಳಸಿದಾಸ ಖೋಡೆ, ಛಬ್ಬಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಬಂದಿಗೋಳ, ತಾಲೂಕು ಅಧ್ಯಕ್ಷ ಮಹಾಬಳೇಶ್ ಮಾಸನಕಟ್ಟಿ, ಪ್ರಧಾನ ಕಾರ್ಯದರ್ಶಿ ಅಲಿ ಸಂದಿಮನಿ, ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ, ಮಲ್ಲಿಕಾರ್ಜುನಗೌಡ ತೆಂಬದಮನಿ ಸೇರಿದಂತೆ, ದಾದಾಪೀರ್ ರಾಟಿಮನಿ ಅನೇಕರು ಉಪಸ್ಥಿತರಿದ್ದರು.
ಅತಿ ಅಚ್ಚುಕಟ್ಟಾಗಿ ನಡೆದ ಜನತಾ ಜಲಧಾರೆ ಜಲಯಾತ್ರೆ ಗ್ರಾಮ ಗ್ರಾಮಗಳಲ್ಲಿ ಸಾರ್ವಜನಿಕರ ಸಹಕಾರ ಅತಿ ಉತ್ಸಾಹ ತಂದಿತು.
Kshetra Samachara
29/04/2022 10:53 pm