ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರದ್ದೂ ತಪ್ಪಿದೆ ತನಿಖಾ ಹಂತದಲ್ಲಿರುವಾಗಲೇ ಪರೀಕ್ಷೆ ಸರಿಯಲ್ಲ ; ಎಚ್.ಡಿ.ಕೆ ಕಿಡಿ

ಹುಬ್ಬಳ್ಳಿ: ಪಿಎಸ್‌ಐ ಪರೀಕ್ಷಾ ಅಕ್ರಮ ಇನ್ನೂ ತನಿಖಾ ಹಂತದಲ್ಲಿದೆ. ಈ ಸಮಯದಲ್ಲಿ ಮರು ಪರೀಕ್ಷೆ ಬೇಡ, ಇಲ್ಲಿ ಸರ್ಕಾರದ ತಪ್ಪಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆಂದು ಹೊರಗಡೆ ಬರಲಿ. ಹಣದ ಪಿಶಾಚಿಗಳು, ಬೇಗನೆ ದುಡ್ಡು ಮಾಡಬೇಕೆಂದು ‌ಹೊರಟಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಖಾಸಗಿ ಹೊಟೇಲ್ ನಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯಾರೂ ಹಣ ಕೊಟ್ಟು ನೇಮಕಾತಿ ಆಗಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಲ್ಲಿ ಅನ್ಯಾಯ ಆಗೋದು ಬೇಡ‌. ಸರ್ಕಾರ ಸರಿಯಾಗಿ ಪರೀಕ್ಷೆಗಳನ್ನ ನಡಸಿಲ್ಲಾ. ಇತ್ತೀಚಿಗೆ ಎಲ್ಲಾ ಇಲಾಖೆಗಳಲ್ಲಿ ಅಕ್ರಮ ನಡೆದಿದೆ. ಈ ವ್ಯವಸ್ಥೆ ಉಳ್ಳವರಿಗೆ ಮಾತ್ರ, ದುಡ್ಡ ಇರುವವರಿಗೆ ಇದನ್ನ ಸರಿಪಡಿಸಬೇಕು ಎಂದರು.

ಸರ್ಕಾರ ತನಿಖೆ ಪೂರ್ಣಗೊಳ್ಳುವ ಮುನ್ನ ರದ್ದು ನಿರ್ಧಾರ ಮಾಡಿದ್ದು ಸರಿಯಲ್ಲ. ತಪ್ಪಿತಸ್ಥರನ್ನ ಶಿಕ್ಷಿಸಿ, ಬಡಮಕ್ಕಳಿಗೆ ಅನ್ಯಾಯ ಮಾಡಬೇಡಿ. ಯಾರು ಹಣ ಕೊಟ್ಟು,ಪರೀಕ್ಷಾ ಅಕ್ರಮದ ಭಾಗಿಯಾಗಿದ್ದಾರೆ ಅಂತರವನ್ನು ಶಿಕ್ಷಿಸಿ. ಈ ಕುರಿತು ಮುಖ್ಯಮಂತ್ರಿಗಖಿಗೆ ಕರೆ ಮಾಡಿ ಮಾತನಾಡುವೆ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಎಚ್.ಡಿ. ಕೆ ಈ ಹಿಂದೆ ಕೆ ಪಿ ಎಸ್ ಸಿ ಯಲ್ಲಿ ಪ್ರಾಮಾಣಿಕತೆ ತರುವುದಾಗಿ ಹೇಳಿದ ಸಿದ್ದರಾಮಯ್ಯ ಏನ್ ಮಾಡಿದ್ರು..? ಶಾಮ್ ಭಟ್ ರನ್ನ ಕೆ ಪಿ ಎಸ್ ಸಿ ಚೇರ್ಮನ್ ಮಾಡಿದ್ದು ಯಾಕೆ‌‌..? ಅರ್ಕಾವತಿ ರಿಡೂ ಮಾಡಿದ್ದಕ್ಕೆ ಶಮ್ ಭಟ್ ಗೆ ಕೆ ಪಿ ಎಸ್ ಸಿ ಗಿಪ್ಟ್ ಕೊಟ್ಟಿದ್ದರು‌. ಒಂದೊಂದು ಪೋಸ್ಟ್ ಗೆ ಒಂದು ಕೋಟಿ ಪಿಕ್ಸ್ ಮಾಡಿಕೊಂಡು ಕೂತಿದ್ರು. ಶಾಮ್ ಭಟ್ ಎಸಿ ಪೋಸ್ಟ್ ಇಷ್ಟು ತಹಶಿಲ್ದಾರರ ಪೋಸ್ಟ್ ಇಷ್ಟು ಅಂತ ಪಿಕ್ಸ್ ಮಾಡಿದ್ರು ಎಂದು ಕಿಡಿ ಕಾರಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/04/2022 06:19 pm

Cinque Terre

62.8 K

Cinque Terre

0

ಸಂಬಂಧಿತ ಸುದ್ದಿ