ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಲಮಂಡಳಿ ನೌಕರರ ಪ್ರತಿಭಟನೆಗೆ ಬೆಂಬಲ ನೀಡಿದ ನಲಪಾಡ್

ಧಾರವಾಡ: ಜಲಮಂಡಳಿ ಕಾರ್ಯ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸಿರುವುದನ್ನು ವಿರೋಧಿಸಿ ನೌಕರರು ನಡೆಸುತ್ತಿರುವ ಧರಣಿಗೆ ಯೂಥ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಹ್ಮದ್ ಹ್ಯಾರೀಸ್ ನಲಪಾಡ್ ಬೆಂಬಲ ಸೂಚಿಸಿದರು.

ಧಾರವಾಡದ ಜಲಮಂಡಳಿ ಎದುರಿಗೆ ನೌಕರರು ಕಳೆದ ನಾಲ್ಕು ದಿನಗಳಿಂದ ಈ ಧರಣಿ ನಡೆಸುತ್ತಿದ್ದಾರೆ. ಎಲ್‌ ಆ್ಯಂಡ್ ಟಿ ಕಂಪನಿಗೆ ಜಲಮಂಡಳಿ ನಿರ್ವಹಣೆ ನೀಡಲಾಗಿದೆ. ಇದರಡಿ ಉದ್ಯೋಗಿಗಳು ಕೆಲಸ ಮಾಡಬೇಕಿದ್ದು, ಎರಡು ವರ್ಷದಲ್ಲಿ ಈ ಖಾಸಗಿ ಕಂಪನಿ ಬಿಟ್ಟು ಹೋದರೆ ನೌಕರರು ಬೀದಿಗೆ ಬರುವಂತಾಗುತ್ತದೆ. ಹೀಗಾಗಿ ಪಾಲಿಕೆ ತಮಗೆ ತಾತ್ಕಾಲಿಕ ಉದ್ಯೋಗದ ಭರವಸೆ ನೀಡಬೇಕು ಎಂದು ನೌಕರರು ಆಗ್ರಹಿಸುತ್ತಿದ್ದಾರೆ. ಇವರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ನಲಪಾಡ್, ನೌಕರರ ಬೇಡಿಕೆ ನ್ಯಾಯಯುತವಾಗಿದೆ ಎಂದರು.

ಸದ್ಯ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದರ ಮಧ್ಯೆ ಮಹಾನಗರ ಪಾಲಿಕೆ, ಕೆಲಸಕ್ಕೆ ಹಾಜರಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ಕೂಡ ಜಾರಿ ಮಾಡಿದ್ದು, ಈ ಪ್ರತಿಭಟನೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/04/2022 04:28 pm

Cinque Terre

118.65 K

Cinque Terre

16

ಸಂಬಂಧಿತ ಸುದ್ದಿ