ಕುಂದಗೋಳ: ಅಭಿವೃದ್ಧಿಯ ಆಕಾಂಕ್ಷೆ, ಕುಂದಗೋಳ ಮತಕ್ಷೇತ್ರದ ಜನರ ಕಷ್ಟಕ್ಕೆ ಧ್ವನಿಯಾಗುವ ಹೃದಯವಂತಿಕೆಯಿಂದ ಇವರು ತಮ್ಮ ದುಡಿಮೆಯಲ್ಲಿ ನೊಂದವರಿಗೆ ಸಹಾಯ ಮಾಡುತ್ತಾ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕೆಲಸ ಮಾಡುತ್ತಾ ನಿಮ್ಮಲ್ಲಿ ಒಬ್ಬರಾಗಿದ್ದಾರೆ.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ತಂದೆ ಅಲ್ಲಾಸಾಬ್ ತಾಯಿ ಬೀಬಿಜಾನ್ ದಂಪತಿಗಳ ಒಂಬತ್ತು ಮಕ್ಕಳಲ್ಲಿ 5ನೇಯವರಾದ ಹಜರತ್'ಅಲಿ ಜೋಡಮನಿ ಬಡತನದ ತುಡಿತ ಬದುಕಿನ ಹೋರಾಟದ ಕಷ್ಟದ ಸುಳಿಗೆ ಸಿಲುಕಿ ಬೆಳೆದು ಬೆಲೆ ಏರಿಕೆ, ಕೃಷಿ ಕಾಯ್ದೆ, ಇಂಧನ ಬೆಲೆ ಬಿಸಿ, ಸಾರಿಗೆ ದರ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿದವರು.
ಬಾಲ್ಯದಲ್ಲೇ ಕಷ್ಟ ಎದುರಿಸಿದ ಹಜರತ್'ಅಲಿ ತಮ್ಮ ದುಡಿಮೆಯಲ್ಲೇ ಇಂದು ವ್ಯವಹಾರ, ವಾಣಿಜ್ಯ, ಹೊಟೇಲ್ ಉದ್ಯಮ ಕ್ಷೇತ್ರಗಳಲ್ಲಿ ಶ್ರಮದ ಬದುಕಿನ ಮಾರ್ಗ ಸವೆಸಿ ಜನರ ಕಷ್ಟಕ್ಕೆ ಧ್ವನಿಯಾಗುವ ಹೃದಯ ವೈಶಾಲ್ಯತೆ ಹೊಂದಿದ್ದಾರೆ.
ಹಿಂದುಳಿದ ಕುಂದಗೋಳ ತಾಲೂಕಿನಲ್ಲಿ ಬಡ ಮಧ್ಯಮ ವರ್ಗದವರೇ ಹೆಚ್ಚು ಈ ಜನರ ಏಳ್ಗೆಯ ಕನಸನ್ನು ಹೊತ್ತ ಜೋಡಮನಿ ಕ್ಷೇತ್ರದ ಮೂಲ ಸೌಕರ್ಯಗಳ ಸಮಸ್ಯೆಗೆ ಇತಿಶ್ರೀ ಹಾಡಲು 2011ರಲ್ಲೇ ರಾಜಕೀಯಕ್ಕೆ ಹರಜರತ್'ಅಲಿ ಆಗಮನ.
ಜೆಡಿಎಸ್ ಪಕ್ಷದ ಬಲಿಷ್ಠ ಅಭ್ಯರ್ಥಿಯಾಗಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯಲಿರುವ ಇವರು, ಮದುವೆ, ಜಾತ್ರೆ, ಧಾರ್ಮಿಕ ಕೆಲಸ, ದೇವಸ್ಥಾನದ ಅಭಿವೃದ್ಧಿ, ಮಸೀದಿ ಅಭಿವೃದ್ಧಿ, ಕ್ರೀಡಾ ಸ್ಪರ್ಧೆ, ಅದೆಷ್ಟೋ ಕುಟುಂಬಕ್ಕೆ ಸಹಾಯಹಸ್ತ ಚಾಚಿದವರು.
ಸಂಪೂರ್ಣ ಕರ್ನಾಟಕ, ಮುಖ್ಯವಾಗಿ ಕುಂದಗೋಳ ಮತಕ್ಷೇತ್ರದ ಬೆಣ್ಣೆಹಳ್ಳದ ನೀರಿನ ತಡೆಗೆ ಡ್ಯಾಂ ನಿರ್ಮಿಸಿ ರೈತರ ಕೃಷಿಗೆ, ಕುಡಿಯುವ ನೀರಿನ ಅನುಕೂಲ ಕಲ್ಪಿಸುವ ಸಂಕಲ್ಪದ ಈ ಜಲಯಾತ್ರೆಗೆ ನೀವೇಲ್ಲರೂ ಬನ್ನಿ ಕೈ ಜೋಡಿಸಿ ಆಹ್ವಾನಿಸುವ ಜಾತ್ಯಾತೀತ ನಾಯಕ ಹಜರತ್'ಅಲಿ, ತಮ್ಮನ್ನು ರಾಜಕಾರಣದಲ್ಲಿ ಬೆಂಬಲಿಸಿ ಎಂದು ಕೋರುತ್ತಾರೆ.
Kshetra Samachara
29/04/2022 02:21 pm