ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಕಿಡಗೇಡಿಗಳ ಕುಟುಂಬಕ್ಕೆ ಸಹಾಯ ಮಾಡಲು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಾಗಿದ್ದು, ಕಲ್ಲು ಹೊಡೆದವರಿಗೆ ಕಾಸು ನೀಡಲು ಮಾಜಿ ಸಚಿವ ಮುಂದಾಗಿದ್ದ ಆದರೆ ತಕ್ಷಣದ ಬೆಳವಣಿಗೆಯಿಂದ ನಿರ್ಧಾರವನ್ನು ಕೈಬಿಟ್ಟಿದ್ದಾರೆ.
ಹೌದು ಪ್ರಕರಣದಲ್ಲಿ ಬಂಧಿತರಾಗಿರೋ ಕುಟುಂಬದ ಮಹಿಳೆಯರಿಗೆ, ಪುಟ್ಟ ಮಕ್ಕಳಿಗೆ ರಮಜಾನ್ ಹಬ್ಬದ ಪ್ರಯುಕ್ತ ಸಹಾಯ ನೀಡಲು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಾಗಿದ್ದು, ಪ್ರತಿ ಕುಟುಂಬಕ್ಕೂ ಫುಡ್ ಕಿಟ್ ಹಾಗೂ 5 ಸಾವಿರ ಧನ ಸಹಾಯಕ್ಕೆ ನಿರ್ಧಾರ ಮಾಡಿ ಫುಡ್ ಕಿಟ್ ಗಳನ್ನು ಹುಬ್ಬಳ್ಳಿಗೆ ರಾವಾನೆ ಮಾಡಿದ್ದರು.
ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನಲೆಯಲ್ಲಿ, ಪವಿತ್ರ ರಮ್ಜಾನ್ ಹಬ್ಬ ಆಚರಣೆಗೆ ತಾಯಂದಿರಿಗೆ ಹೆಣ್ಣುಮಕ್ಕಳಿಗೆ ಪುಟ್ಟ ಮಕ್ಕಳಿಗೆ ಸಹಾಯಹಸ್ತ ಮಾಡ್ತಿದ್ದಿವಿ ಅಂತ ಸಂದೇಶ ನೀಡಿದ್ದೇವೆ ಎಂದು ಕಲ್ಲು ಹೊಡೆದವರಿಗೆ ಸಹಾಯಕ್ಕೆ ಮುಂದಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ತಕ್ಷಣವೇ ಎಚ್ಚೇತ್ತುಕೊಂಡು ನಿರ್ಧಾರವನ್ನು ಕೈಬಿಟ್ಟಿದ್ದಾರೆ.
ಇಂದು ಮಧ್ಯಾಹ್ನ ನಾಲ್ಕು ಗಂಟೆಗೆ ನಿಗದಿ ಮಾಡಿದ್ದ ಕಾರ್ಯಕ್ರಮ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/04/2022 01:00 pm