ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಿರುಕು ಮೂಡಿದ್ದು, ಧಾರವಾಡ ಗ್ರಾಮೀಣ ಘಟಕಕ್ಕೆ ಒಂದು ದಾರಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಘಟಕದ್ದು ಇನ್ನೊಂದು ದಾರಿಯಂತಾಗಿದೆ.
ಹೌದು. ಹೊಡೆದು ಹೋಳಾದಂತಾದ ಧಾರವಾಡ ಜಿಲ್ಲಾ ಕಾಂಗ್ರೆಸ್. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ ಅಸಮಾಧಾನ ಹೊರಹಾಕಿದ್ದಾರೆ. ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ವಿರುದ್ಧ ಅಸಮಾಧಾನ ಹೊರಹಾಕಿದ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ್, ಶಾಸಕ ಪ್ರಸಾದ್ ಅಬ್ಬಯ್ಯ ಅವರ ಎದುರೇ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಪಕ್ಷದ ಯಾವುದೇ ಮೀಟಿಂಗ್‌ಗಳಿಗೆ ನಮಗೆ ಹೇಳುವುದಿಲ್ಲ, ಧಾರವಾಡ ಜಿಲ್ಲೆಯ ಕಾಂಗ್ರೆಸ್ ಸ್ಥಿತಿ ಪ್ರೈವೇಟ್ ಲಿಮಿಟೆಡ್ ಕಂಪನಿ ಆಗಿದೆ. ನಾವು ರಕ್ತ ಸುಟ್ಟುಕೊಂಡು ಪಕ್ಷವನ್ನು ಕಟ್ಟಿದ್ದೇವೆ, ನಾವು ಸುಮ್ಮನೆ ಕುಳಿತುಕೊಳ್ಳುವ ಮಾತೆ ಇಲ್ಲ. ಪಕ್ಷದ ಸಿದ್ಧಾಂತಗಳ ಮೇಲಾದ್ರೂ ನಮ್ಮನ್ನ ಕರೆಯಿರಿ. ಇಲ್ಲಿ ಯಾರೋ ಬರ್ತಾರೆ, ಯಾರೋ ಹೋಗ್ತಾರೆ ನಮ್ಮಲ್ಲಿ ಯಾವುದೇ ಒಗ್ಗಟ್ಟಿಲ್ಲ. ಇದರಿಂದಾಗಿ ಯಾವುದೇ ಹೋರಾಟ ಮಾಡುವಾಗ 10-15 ಕಾರ್ಯಕರ್ತರನ್ನ ಸೇರಿಸುವುದು ನಮ್ಮ ಕಡೆಯಿಂದ ಆಗುತ್ತಿಲ್ಲ. ಈ ರೀತಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವುದು ಹೇಗೆ. ಇದೇ ರೀತಿ ಆದ್ರೆ ಇನ್ನೂ ಇಪ್ಪತ್ತು ವರ್ಷಗಳಾದ್ರೂ ಇಲ್ಲಿಯ ಬಿಜೆಪಿಯನ್ನು ನಾವು ಏನೂ ಮಾಡಲಿಕ್ಕೆ ಆಗುವುದಿಲ್ಲ. ಕಾಂಗ್ರೆಸ್ ಪಕ್ಷ ಪ್ರೈವೇಟ್ ಲಿಮಿಟೆಡ್ ಕಂಪನಿ ಅಲ್ಲ, ನೀವು ಆ ಕಡೆ, ನಾವು ಈ ಕಡೆ ಆಗಬಾರದೆಂದ ಅನಿಲಕುಮಾರ ಪಾಟೀಲ್.
Kshetra Samachara
27/04/2022 12:52 pm