ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜಲಮಂಡಳಿ ಸಿಬ್ಬಂದಿ ಪ್ರತಿಭಟನೆ: ನೀರು ಪೂರೈಕೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ನೀರು ಸರಬರಾಜು ನಿರ್ವಹಣೆಗಾಗಿ ಕರ್ನಾಟಕ ಜಲಮಂಡಳಿಯವರಿಂದ ಕಳೆದ 20 ವರ್ಷಗಳಿಂದಲೂ ಗುತ್ತಿಗೆ, ದಿನಗೂಲಿ ಹಂಗಾಮಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಈಗ ನೀರು ಸರಬರಾಜು ನಿರ್ವಹಣೆಯನ್ನು ಮೆ.ಎಲ್ ಆಂಡ್ ಟಿ ಕಂಪೆನಿಗೆ ಗುತ್ತಿಗೆ ವಹಿಸಿ, ಕೆಲಸಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕೊಟ್ಟಿರುವುದುನ್ನು ಖಂಡಿಸಿ ಏ. 26 ರಂದು ಧಾರವಾಡದ ಜಲಮಂಡಳಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ನೌಕರರ ಸಂಘದ ಅಧ್ಯಕ್ಷ ವಿ.ಎನ್. ಹಳಕಟ್ಟಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ, ಧಾರವಾಡ ಮಹಾನಗರ ಸಭೆಯ ನೀರು ಸರಬರಾಜು ವಿಭಾಗದ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘದ ವತಿಯಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು. ಜಲಮಂಡಳಿಯಲ್ಲಿ 600 ಕ್ಕೂ ಹೆಚ್ಚು ನೌಕರರು 20 ವರ್ಷದಿಂದ ನಿರಂತರ ಕೆಲಸ ಮಾಡುತ್ತಿದ್ದಾರೆ. ಆದರೆ, ಪಾಲಿಕೆಯವರು ಕರ್ನಾಟಕ ಜಲಮಂಡಳಿಯವರಿಂದ ಪ್ರಸ್ತುತ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಕ ಸಮೇತ ಹಸ್ತಾಂತರಿಸಿಕೊಳ್ಳದೇ ಸಾಮೂಹಿಕವಾಗಿ ವಜಾ ಮಾಡಿ, ಹೊಸಬರನ್ನು ನೇಮಕ ಮಾಡಿಕೊಂಡು ಕೆಲಸ ನಿರ್ವಹಿಸುವಂತೆ ಖಾಸಗಿ ಗುತ್ತಿಗೆದಾರ ಎಲ್‌ಆಂಡ್‌ಟಿ ಅವರಿಗೆ ಅನುಮತಿ ನೀಡಿದ್ದು, ಖಂಡನೀಯ ಎಂದರು.

ರಾಜ್ಯದ ಎಲ್ಲ ನಗರ, ಮಹಾನಗರಗಳಿಗೆ ನೀರು ಸರಬರಾಜು ಕಾಮಗಾರಿಯನ್ನು ಎಕ್ಸಿಕ್ಯೂಟ್ ಮಾಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಕಾನೂನು ಅನ್ವಯ ಇದ್ದಾಗಲೂ ಸಹ ಕರ್ನಾಟಕ ಜಲಮಂಡಳಿಯನ್ನೇ ಹೊರಗಿಟ್ಟು, ಸಂಬಂಧವಿಲ್ಲದ ಕೆಯುಐಡಿಎಫ್‌ಸಿಯನ್ನು ಬಳಸಿಕೊಂಡು ಮಹಾನಗರ ಪಾಲಿಕೆಯವರು, ಕಾಮಗಾರಿಯನ್ನು ಎಲ್‌ಆಂಡ್‌ಟಿ ಅವರಿಗೆ ಒಪ್ಪಂದ ಅನ್ವಯಿಸಿ ನೀಡಲಾಗುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ ಎಂದರು.

ಕರ್ನಾಟಕ ಜಲಮಂಡಳಿಯ ಹಂಗಾಮಿ, ಗುತ್ತಿಗೆ ಹಾಗೂ ದಿನಗೂಲಿ ನೌಕರರನ್ನು ಪಾಲಿಕೆಯವರು ವರ್ಕ್ ಸಮೇತ ಹಸ್ತಾಂತರ ಮಾಡಿ, ಆದೇಶ ಹೊರಡಿಸಬೇಕು. ಇದರಿಂದ ಯೋಜನೆ ಪೂರ್ಣಗೊಳ್ಳುವವರೆಗೂ ನಿಯೋಜನೆ ಮೇರಿಗೆ ಎಲ್‌ಆಂಡ್‌ಟಿ ಅವರಲ್ಲಿ ಸೇವೆ ನಿರ್ವಹಿಸುವಂತೆ ಆದೇಶವನ್ನು ಮಹಾನಗರ ಪಾಲಿಕೆ ಮಾಡಬೇಕು. ಹೀಗೆ ಆದಲ್ಲಿ ಜಲಮಂಡಳಿಯ ನೌಕರರು ತಕ್ಷಣ ಕೆಲಸಕ್ಕೆ ಹಾಜರು ಆಗುತ್ತೇವೆ ಎಂದು ಮನವಿ ಮಾಡಿದರು.

ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಜಲಮಂಡಳಿಯ ಅಧೀನದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಏ. 26 ರಿಂದ ಸಾಮೂಹಿಕವಾಗಿ ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಹೀಗಾಗಿ ಅವಳಿನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಸುದ್ದಿಗೋಷ್ಠಿಯಲ್ಲಿ ವಿ.ಎನ್. ಹಳಕಟ್ಟಿ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

25/04/2022 07:19 pm

Cinque Terre

51.77 K

Cinque Terre

3

ಸಂಬಂಧಿತ ಸುದ್ದಿ