ವರದಿ: ಉದಯ ಗೌಡರ
ಹೌದು. ರಾಜ್ಯ ರಾಜಕೀಯದಲ್ಲಿ ಕಲಘಟಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಅವಕಾಶ ಕಡಿಮೆ ಎಂಬುದು ಮೊದಲಿನಿಂದಲೂ ಸಾಬೀತಾಗುತ್ತಾ ಬಂದಿದೆ.
ಈ ಮುಂಚೆ ಕುಂದಗೋಳ ಕ್ಷೇತ್ರದ ಚಿಕ್ಕನಗೌಡರ ರವರು ಎರಡು ಬಾರಿ ತಾಲೂಕಿನಲ್ಲಿ ಅಧಿಕಾರ ನಡೆಸಿದ್ದಾರೆ. ಅದೆ ರೀತಿ ಪಿ ಸಿ ಸಿದ್ದನಗೌಡರ. ಮಾಜಿ ಸಚಿವ ಸಂತೋಷ ಲಾಡ್ ಹೀಗೆ ಹೊರಗಿನವರೆ ತಾಲೂಕಿನವರು ಆಡಳಿತ ನಡೆಸಿದ್ದಾರೆ.
ಆದರೆ ಇವರೆಲ್ಲರೂ ಚುನಾವಣೆಯಲ್ಲಿ ಜಯಗಳಿಸಿದ ನಂತರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅದರಲ್ಲೂ ಸಂತೋಷ ಲಾಡ್ ಸಚಿವರಾದರೂ ಹೆಚ್ಚಾಗಿ ಕ್ಷೇತ್ರಕ್ಕೆ ಮುಖ ತೋರಿಸಲೇ ಇಲ್ಲ.
ಕಳೆದ ಚುನಾವಣೆಯಲ್ಲಿ ಲಾಡ್ ಕಾರ್ಯಕರ್ತರ ಸಭೆಯಲ್ಲಿ " ನಾನು ಐದು ವರ್ಷಕೊಮ್ಮೆ ಬರತೇನಿ... ಏನಿವಾಗ'' ಎಂದು ರೋಪ್ ಹಾಕಿದ್ದರು. ಇದರ ಪರಿಣಾಮ ಕ್ಷೇತ್ರದ ಜನರು ಸ್ವಾಭಿಮಾನಿಗಳಾಗಿ ಸಿ ಎಂ ನಿಂಬಣ್ಣವರ ರವರಿಗೆ ಅವಕಾಶ ನೀಡಿದರು.
ಅದೇ ರೀತಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಮತ್ತೆ ಸಂತೋಷ ಲಾಡ್ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಇದಲ್ಲದೆ ಹುಬ್ಬಳ್ಳಿಯ ನಾಗರಾಜ್ ಛಬ್ಬಿ ಸಹ ಸಜ್ಜಾಗಿದ್ದಾರೆ. ಹಾಗಾದರೆ ತಾಲೂಕಿನಲ್ಲಿ ಚುನಾವಣೆ ಎದುರಿಸುವ ಶಕ್ತಿ ಸ್ಥಳೀಯರಿಗೆ ಇಲ್ಲವಾ ಎಂಬುದು ಪ್ರಶ್ನೆಯಾಗಿದೆ.
ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಕಲಘಟಗಿ ತಾಲೂಕಿನ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿ ಕೊಳ್ತಾರಾ, ಅಥವಾ ಮತ್ತೆ ಬೇರೆ ತಾಲೂಕಿನ ಅಭ್ಯರ್ಥಿಗಳಿಗೆ ಬಿಟ್ಟು ಕೊಡ್ತಾರಾ ಕಾದುನೋಡಬೇಕಾಗಿದೆ.
ಒಂದು ವೇಳೆ ಹೊರ ತಾಲೂಕಿನವರು ಟಿಕೆಟ್ ಗಿಟ್ಟಿಸಿ ಕೊಂಡು ಬಂದರೆ ಕ್ಷೇತ್ರದ ಜನತೆ ಅವರನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಈ ಎಲ್ಲ ಗೊಂದಲಗಳಿಗೆ ಕಲಘಟಗಿ ತಾಲೂಕಿನ ರಾಜಕೀಯ ಮುಖಂಡರು ತೆರೆ ಎಳೆಯಬೇಕಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/04/2022 04:32 pm