ಹುಬ್ಬಳ್ಳಿ- ಕಳೆದ ನಾಲ್ಕೈದು ದಿನಗಳಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೋಮು ಗಲಭೆಯ ಅಗ್ನಿ ಜ್ವಾಲೆ ಹೊತ್ತಿ ಉರಿಯುತ್ತಿದೆ. ಈ ಘಟನೆಯಿಂದ ಜನ ಭಯಬೀತರಾಗಿದ್ದಾರೆ. ಆದ್ದರಿಂದ ಯಾರೂ ಕೂಡ ಗಲಭೆ ಎಬ್ಬಿಸದೇ ನಾವೇಲ್ಲರೂ ಒಂದೇ ಎಂಬ ಭಾವನೆಯಿಂದ ಇರಬೇಕೆಂದು ಪಬ್ಲಿಕ್ ನೆಕ್ಸ್ಟ್ ಮೂಲಕ ಮುಸ್ಲಿಂ ಧಾರ್ಮಿಕ ಗುರು ಹಾಪಿಸ್ ಶಾರಿಕ್ ಅಹಮ್ಮದ್ ಪಟೇಲ್ ಹೇಳಿದರು.
ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೂಲಕ ಹೇಳಿಕೊಂಡ ಧಾರ್ಮಿಕ ಗುರು, ಕೋಮು ಗಲಭೆ ಇಸ್ಲಾಂ ಧರ್ಮದಲ್ಲಿ ಅನುಮತಿ ಇಲ್ಲ. ನಾವು ಯಾವ ದೇಶದಲ್ಲಿ ಬಾಳುತ್ತೇವೊ ಅಲ್ಲಿನ ಕಾನೂನನ್ನು ಪಾಲಿಸಬೇಕು. ನಾವು ಇದೇ ದೇಶದಲ್ಲಿ ಹುಟ್ಟಿದ್ದೇವೆ ಒಂದೇ ತಾಯಿಯ ಮಕ್ಕಳಾಗಿ ಬಾಳಬೇಕೆಂದು ಸಂದೇಶ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/04/2022 05:31 pm