ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗಿಲ್ಲ, 75% ಕಾಮಗಾರಿ ಪೂರ್ಣಗೊಂಡಿದೆ: ಸಚಿವ ಭೈರತಿ ಬಸವರಾಜ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದ ಸ್ಮಾರ್ಟ್ ಸಿಟಿ ಯೋಜನೆಯ ಪ್ರತಿಶತ 75% ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ. ಇನ್ನುಳಿದ 25% ಕಾಮಗಾರಿಯನ್ನು ಮುಂದಿನ ತಿಂಗಳ ಒಳಗಾಗಿ ಪೂರ್ಣಗೊಳಿಸಿ ಸಾರ್ವಜನಿಕ ಮುಕ್ತವಾಗಿ ಮಾಡುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

ನಗರದಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆಯ ಮಾರುಕಟ್ಟೆ ಉದ್ಘಾಟನೆ ವೇಳೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ವಿಳಂಬವಾಗುತ್ತಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಸ್ಮಾರ್ಟ್ ಸಿಟಿ ಯಾವುದೇ ಕಾರಣಕ್ಕೂ ವಿಳಂಬವಾಗುತ್ತಿಲ್ಲ. ಈಗಾಗಲೇ ನಿಗದಿತ ಅವಧಿಯಂತೇ 75% ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಇನ್ನುಳಿದ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ. ಮೇ ತಿಂಗಳ ಅಂತ್ಯದೊಳಗೆ ಎಲ್ಲ ಯೋಜನೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದರು.

ಸ್ಪೋರ್ಟ್ಸ್ ಗ್ರೌಂಡ್ ಕಾಮಗಾರಿಗೆ ಮೊನ್ನೆಯಷ್ಟೇ ವರ್ಕ್ ಆರ್ಡರ್ ಕೊಟ್ಟಿದ್ದು, ಅದು ಸ್ವಲ್ಪ ತಡವಾಗಲಿದೆ. ಶೀಘ್ರವಾಗಿ ಅದರ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ ನೀಡಿದ್ದೇನೆ ಎಂದರು.

Edited By : Nagesh Gaonkar
Kshetra Samachara

Kshetra Samachara

18/04/2022 10:07 pm

Cinque Terre

40.17 K

Cinque Terre

5

ಸಂಬಂಧಿತ ಸುದ್ದಿ