ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಗಲಾಟೆ ಹಿನ್ನೆಲೆಯಲ್ಲಿ 80 ರಿಂದ 85 ಜನರನ್ನು ಈಗಾಗಲೇ ಅರೆಸ್ಟ್ ಮಾಡಿದ್ದೇವೆ. ಗಲಭೆಕೋರರ ಮೇಲೆ ಕಟ್ಟು ನಿಟ್ಟಿ ಕ್ರಮ ಕೈಗೊಳ್ಳುತ್ತೇವೆ. ಇದಕ್ಕಿಂತ ಬೇರೆ ಬೇರೆ ಮಾದರಿ, ಹಾಗೂ ಬೇರೆ ಸೆಕ್ಷನ್ ಅಡಿ ಕ್ರಮ ಕೈಗೊಳ್ಳುತ್ತೇವೆ. ರೌಡಿಶೀಟರ್ ಕೇಸ್ ಹಾಕಿ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಲಾಟೆ ಮಾಡಿದವರ ವಿರುದ್ಧ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಿನ್ನೆ ನಡೆದ ಗಲಭೆ ಬಗ್ಗೆ ಮಾಹಿತಿ ಪಡೆದಿದ್ದೇವೆ. ವಿಡಿಯೋ ಎನಿಮೇಶನ್ ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದಾದ ಮೇಲೂ ಗೂಂಡಾಗಿರಿ ಮಾಡೋದು, ಪೊಲೀಸ್ ವಾಹನ ಮೇಲೆ ಕಲ್ಲು ತೂರೋದು ಅಕ್ಷ್ಯಮ್ಯ ಅಪರಾಧ.
ಯಾರು ತಪ್ಪಿತಸ್ಥರಿದ್ದಾರೆ ಎಲ್ಲರನ್ನೂ ಒದ್ದು ಒಳಗೆ ಹಾಕಲು ಹೇಳಿದ್ದೇನೆ. ಇನ್ನೊಂದು ಬಾರಿ ಈ ರೀತಿಯ ಕೃತ್ಯಕ್ಕೆ ಕೈಹಾಕದಂತೆ ಕ್ರಮ ಕೈಗೊಳ್ಳಿ ಎಂದಿದ್ದೇನೆ ಎಂದರು.
ಎನಿಮೇಶನ್ ಹಾಕಿದ ಹುಡುಗನ ಮನೆಗೆ ಕೆಲ ಗೂಂಡಾಗಳು ಹೋಗಿದ್ದರು ಎನ್ನುವ ಮಾಹಿತಿ ಇದೆ. ಆ ವೇಳೆ ಲಾಂಗು, ಮಚ್ಚು ತೋರಿಸಿ ಬೆದರಿಕೆಯನ್ನು ಹಾಕಿದ್ದಾರೆ. ಬೆದರಿಕೆ ಹಾಕಿದವರನ್ನು ಬಂಧಿಸಬೇಕು. ಕಾರ್ಪೊರೇಟರ್ ಪತಿ ಇರಲಿ, ಅವರಪ್ಪ ಇರಲಿ ಯಾರನ್ನೂ ಬಿಡಲ್ಲ.
ಕಳೆದ 15 ವರ್ಷದ ಹಿಂದೆ ಈ ರೀತಿಯ ಗಲಭೆ ಆಗಿತ್ತು. ಅಲ್ಲಿಂದ ಹುಬ್ಬಳ್ಳಿಯಲ್ಲಿ ಯಾವುದೇ ಗಲಭೆ ಆಗಿದ್ದಿಲ್ಲ. ಈ ಗಲಾಟೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಗೃಹ ಮಂತ್ರಿಗಳು ಆದೇಶಿಸಿದ್ದಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 08:50 pm