ಹುಬ್ಬಳ್ಳಿ : ರಾಜ್ಯದಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಸೌಹಾರ್ದತೆಯ ಬಾಳುವ ಸಂದೇವೊಂದನ್ನು ಇಟ್ಟುಕೊಂಡು ವ್ಯಕ್ತಿಯೊಬ್ಬರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸೈಕಲ್ ಯಾತ್ರೆ ಆರಂಭಿಸಿದ್ದಾನೆ.
ಹೌದು ಹುಬ್ಬಳ್ಳಿಯಿಂದ ಆಮ್ ಆದ್ಮಿ ಪಾರ್ಟಿಯ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಿರೇಮಠ ಈ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಸೌಹಾರ್ದತೆಯ ಸೈಕಲ್ ಯಾತ್ರೆಗೆ ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡ ಭಾಸ್ಕರ ರಾವ್ ಚಾಲನೆ ನೀಡಿದರು.
ಸೈಕಲ್ ಯಾತ್ರೆಯಲ್ಲಿ ಮಲ್ಲಿಕಾರ್ಜುನಯ್ಯ ಹಿರೇಮಠ ಅವರು ಶಿಗ್ಗಾವ್ - ಹಾವೇರಿ - ದಾವಣಗೆರೆ - ಚಿತ್ರದುರ್ಗ - ತುಮಕೂರು ಮಾರ್ಗವಾಗಿ 4 ದಿನಗಳಲ್ಲಿ ಬೆಂಗಳೂರು ತಲುಪುವ ಯೋಜನೆ ಮಾಡಿಕೊಂಡಿದ್ದು, ದಾರಿಯಲ್ಲಿ ಬರುವ ಪ್ರಮುಖ ಜಿಲ್ಲೆಗಳಲ್ಲಿ ಸೌಹಾರ್ದತೆಯ ಸಂದೇಶ ಸಾರುತ್ತಾ ಬೆಂಗಳೂರಿನತ್ತ ಸಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 06:41 pm