ಹುಬ್ಬಳ್ಳಿ: ಲಿಂಗೈಕ್ಯ ತೋಂಟದಾರ್ಯ ಸಿದ್ದಲಿಂಗ ಶ್ರೀಗಳ ದಿನವನ್ನು ಭಾವೈಕ್ಯತೆ ದಿನವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಯಾರದೋ ಮನವಿಗೆ ಬೆಲೆ ಕೊಟ್ಟು ಹೇಳಿಕೆ ನೀಡಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ದಿನ ಸಿಎಂ ಅವರು ಗದಗನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದು ಆಘಾತಕಾರಿ ವಿಷಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾವೈಕ್ಯತೆಗೆ ಹೆಸರಾಗಿದ್ದ ಶಿರಹಟ್ಟಿ ಪರಂಪರೆಯನ್ನು ಸಿಎಂ ತಿಳಿದುಕೊಂಡಿಲ್ಲ. ರಾಜ್ಯದಲ್ಲಿ ಯಾವ ಮಠಗಳು ಭಾವೈಕ್ಯತೆಗೆ ಹೆಸರಾಗಿದೆ ಎಂಬುದನ್ನು ಸಿಎಂ ನೆನಪಿಟ್ಟುಕೊಳ್ಳಬೇಕಿದೆ ಎಂದು ಹೇಳಿದರು.
ಸಿಎಂ ಅವರೇ ನೀವು ಶಿರಹಟ್ಟಿ ಮಠಕ್ಕೆ ಬಹಳ ಸಲ ಬಂದಿದ್ದೀರಿ, ಯಾವುದೋ ಒತ್ತಡಕ್ಕೆ ಮಣಿದು ಈ ನಿರ್ಧಾರ ಘೋಷಿರುವುದು ಸರಿಯಲ್ಲ. ಎರಡು ವರ್ಷದ ಹಿಂದೆ ವೀರಶೈವ, ಲಿಂಗಾಯತ ಸಮುದಾಯ ಎರಡು ಭಾಗ ಎಂದು ಹೇಳುತ್ತಿದ್ದರು, ಆದರೇ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿದ್ದವರನ್ನು ನೀವು ಹೇಗೆ ಭಾವೈಕ್ಯತೆ ಮೂರ್ತಿ ಅಂತ ಹೇಳುತ್ತಿರಿ. ಅಷ್ಟೇ ಅಲ್ಲದೇ ಒಂದು ಸಮುದಾಯದವರನ್ನು ಇಬ್ಬಾಗ ಮಾಡಿದ್ದವರನ್ನು ಭಾವೈಕ್ಯತೆ ಎಂದು ಹೇಗೆ ಹೇಳುತ್ತಿರಿ ಎಂದು ಪ್ರಶ್ನಿಸಿದರು.
ಶಿರಹಟ್ಟಿ ಫಕ್ಕಿರೇಶ್ವರ ಸ್ವಾಮಿಗಳಿಗೆ ಕೋಮು ಸೌಹಾರ್ದ ಪ್ರಶಸ್ತಿ ಕೊಡಲಾಯಿತು. ಆದರೇ ಆ ಸ್ವಾಮಿಗೆ ಪ್ರಶಸ್ತಿ ನೀಡಲಾಯಿತು ಎಂದರು. ನೀವು ನೀಡಿದ ಹೇಳಿಕೆ ನಮ್ಮ ಸಮಾಜಕ್ಕೆ ಕೊಡಲಿ ಪೆಟ್ಟು ಕೊಟ್ಟಂತಿದೆ. ಸದಾಕಾಲವೂ ಆರ್.ಎಸ್.ಎಸ್ ಸಂಘ ಪರಿಹಾರ ವಿರೋಧ ಮಾಡುವ ಸ್ವಾಮೀಜಿಗೆ ಹೇಗೆ ಹೊಗಳುತ್ತಿರಿ.
ಆ ಸ್ವಾಮಿಗಳು ಆರ್.ಆರ್. ಎಸ್ ಸಂಘಪರಿವಾರವನ್ನು ವಿರೋಧ ಮಾಡುತ್ತಾ ಬಂದಿದ್ದರು. ಹೀಗಾಗಿ ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ನಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಗೆ ಪತ್ರ ಬರೆಯುವುದಾಗಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 06:12 pm