ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಚಿವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಹೆಚ್ಚಿದ ಒತ್ತಡ

ಧಾರವಾಡ: ಒಬ್ಬ ಮನುಷ್ಯ ಸಾಯುವ ಮುನ್ನ ಯಾವತ್ತೂ ಸುಳ್ಳು ಹೇಳುವುದಿಲ್ಲ. ರಾಜ್ಯದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಅಂಧಾ ದರ್ಬಾರ್ ನಡೆಸಿದ್ದಾರೆ. ಸಾಲ ಮಾಡಿ ಗುತ್ತಿಗೆ ಕೆಲಸ ಮಾಡಿದ ಗುತ್ತಿಗೆದಾರನೊಬ್ಬ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದಕ್ಕೆ ನೇರ ಕಾರಣ ಸಚಿವ ಈಶ್ವರಪ್ಪನವರು. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಆಗ್ರಹಿಸಿದರು.

ಸಂತೋಷ್ ಪಾಟೀಲ ಅವರಿಗೆ ಸಂತಾಪ ಸೂಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ಪೆರಸೆಂಟ್ ವಿಷಯ ಇದೀಗ ಆತ್ಮಹತ್ಯೆವರೆಗೂ ಹೋಗಿದೆ. ಇಂದಿನ ವ್ಯವಸ್ಥೆ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ನಾವು ಭ್ರಷ್ಟಾಚಾರದ ಆರೋಪ ಮಾಡಿದ್ದೆವು. ಇದಕ್ಕೆ ಸಂಬಂಧಿಸಿದಂತೆ ಸುವರ್ಣಸೌಧದಲ್ಲಿ ಸಭೆ ಕರೆದಿದ್ದರು. ಆಗ ಸಚಿವ ಸಿ.ಸಿ.ಪಾಟೀಲ ಅವರು ಎಲ್ಲ ವ್ಯವಸ್ಥೆ ಸರಿ ಮಾಡುತ್ತೇವೆ ಎಂದಿದ್ದರು. ಅವರು ಆ ಮಾತುಕತೆ ಮಾಡಿದ್ದಕ್ಕೆ ಎಲ್ಲವೂ ಸರಿ ಹೋಗುತ್ತದೆ ಎಂದುಕೊಂಡಿದ್ದೆವು. ಆದರೆ, ಯಾವ ವ್ಯವಸ್ಥೆಯೂ ಬದಲಾಗಲಿಲ್ಲ ಎಂದರು.

ಶೀಘ್ರ ಕಾಮಗಾರಿಗಳನ್ನು 4ಜಿಯಲ್ಲಿ ನೀಡುತ್ತಾರೆ. ಸಂತೋಷ್ ಪಾಟೀಲ ಅವರು ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡಿದ್ದರು. ಹಿಂಡಲಗಾದಲ್ಲಿ ನೂರು ವರ್ಷಗಳ ನಂತರ ಜಾತ್ರೆ ಇತ್ತು. ಹೀಗಾಗಿ ತುರ್ತು ಕೆಲಸ ಮಾಡಿಸಿದ್ದರು. ಸಾಲ ಮಾಡಿ ಅವರು ಕಾಮಗಾರಿ ನಡೆಸಿದ್ದರು. ನಡೆಸಿದ ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಒಂದು ವರ್ಷದಿಂದ ಓಡಾಡಿದ್ದರು. ಹಣ ಬಿಡುಗಡೆ ಆಗಿರಲಿಲ್ಲ. ಸಾಲಗಾರರ ಕಾಟವೂ ಅವರಿಗೆ ಹೆಚ್ಚಾಗಿತ್ತು. ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸದ್ಯ ಈಶ್ವರಪ್ಪ ಹಾಗೂ ಅವರ ಆಪ್ತ ಸಹಾಯಕರ ಮೇಲೆ ದೂರು ದಾಖಲಾಗಿದೆ. ಆದ್ದರಿಂದ ಕೂಡಲೇ ಸಚಿವರನ್ನು ವಜಾಗೊಳಿಸಿ ಅವರ ಮೇಲೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈಶ್ವರಪ್ಪ ಒಬ್ಬ ಹಿರಿಯ ಸಚಿವ ಎಂದು ನೋಡಬಾರದು. ಕೂಡಲೇ ಅವರನ್ನು ವಿಚಾರಣೆಗೊಳಪಡಿಸಬೇಕು. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಇಲ್ಲದೇ ಹೋದರೆ ಪ್ರಧಾನಮಂತ್ರಿವರೆಗೂ ನಾವು ಹೋರಾಟದ ರೂಪುರೇಷೆ ಹಾಕಿಕೊಳ್ಳುತ್ತೇವೆ ಎಂದರು.

ಭ್ರಷ್ಟಾಚಾರದಿಂದ ಇಷ್ಟು ದಿನ ದುಡ್ಡು ಹೋಗುತ್ತಿತ್ತು. ಆದರೆ, ಈಗ ಜೀವವೇ ಹೋಗುವಂತಾಗಿದೆ. ಸಂತೋಷ್ ತಮ್ಮ ಸಾವಿಗೆ ಈಶ್ವರಪ್ಪನವರೇ ನೇರ ಹೊಣೆ ಎಂದು ಬರೆದಿದ್ದಾರೆ. ಒಂದು ವರ್ಷದ ಅವಧಿಯಲ್ಲಿ 4 ಕೋಟಿ ರೂಪಾಯಿಯನ್ನು ಸಂತೋಷ್‌ಗೆ ಈ ಸರ್ಕಾರದಿಂದ ಕೊಡಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/04/2022 01:49 pm

Cinque Terre

35.17 K

Cinque Terre

3

ಸಂಬಂಧಿತ ಸುದ್ದಿ