ಧಾರವಾಡ: ಧಾರವಾಡದ ನುಗ್ಗಿಕೇರಿಯ ಗಲಾಟೆಯಲ್ಲಿ ಮುಸ್ಲಿಂ ವ್ಯಾಪಾರಿ ನಬೀಸಾಬರ ಅಂಗಡಿಯನ್ನು ಧ್ವಂಸಗೊಳಿಸಿದ್ದು ಖಂಡನೀಯ ಎಂದು ಯೂತ್ ಕಾಂಗ್ರೆಸ್ ರಾಜ್ಯಾದ್ಯಕ್ಷ ನಲಪಾಡ್ ಅಂಗಡಿಕಾರನಿಗೆ ಸಹಾಯ ಹಸ್ತ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯದ ಮುಂದೆ ಅಂಗಡಿಕಾರನಿಗೆ ತೊಂದರೆ ನೀಡಿರುವುದು ಸರಿಯಲ್ಲ. ಅವನಲ್ಲಿ ನನಗೆ ಮುಸಲ್ಮಾನನೂ, ಹಿಂದೂನೂ ಕಾಣಲಿಲ್ಲ. ಆತ ಒಬ್ಬ ಭಾರತೀಯನಾಗಿ ಕಂಡಿದ್ದಾನೆ. ಆ ವ್ಯಾಪಾರಿಗೆ ನಾವೆಲ್ಲ ಧೈರ್ಯ ತುಂಬಬೇಕು. ಆತನ ಜೊತೆಯಲ್ಲಿದ್ದೇವೆ ಎಂದು ತೋರಿಸಲು ಬಂದಿದ್ದೇವೆ. ರಾಷ್ಟ್ರೀಯ ಯುವ ಕಾಂಗ್ರೆಸ್‌ನಿಂದ ಪ್ರತಿ 4, ಅಂಗಡಿಗೆ 25 ಸಾವಿರ ಸಹಾಯ ಮಾಡಲು ನಮ್ಮ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ನೀಡಲು ಮುಂದಾಗಿದ್ದಾರೆ. ಇದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸಂತಸ ತಂದಿದೆ. ಅನ್ಯಾಯ ಆದವರಿಗೆ ಯಾವಗಿದ್ದರೂ ಯೂತ್ ಕಾಂಗ್ರೆಸ್ ಸಹಾಯ ಮಾಡಿದೆ. ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ಧರ್ಮದ ಮೇಲೆ ಸಹಾಯ ನೀಡಲ್ಲ. ನಾವು ನೋಡೋದು ಒಬ್ಬ ಭಾರತೀಯನಾಗಿ, ಒಬ್ಬ ಕನ್ನಡಿಗನಾಗಿ ಎಂದು ನಲಪಾಡ್ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/04/2022 06:24 pm