ಧಾರವಾಡ: ನಿನ್ನೆ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ವ್ಯಾಪಾರ ಮಾಡುತ್ತಿದ್ದ ನಬಿಸಾಬರ ಅಂಗಡಿ ದ್ವಂಸಗೊಳಿಸಿದ್ದ ಹಿಂದೂ ಸಂಘಟನೆಗಳ ಕೃತ್ಯಕ್ಕೆ ರಾಜ್ಯವ್ಯಾಪಿ ಖಂಡನೆ ವ್ಯಕ್ತವಾಗಿದೆ. ಬಡ ಮುಸ್ಲಿಂ ವ್ಯಾಪಾರಿಗೆ ಆರ್ಥಿಕ ಸಹಾಯ ಹಸ್ತ ನೀಡಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮಾನವೀಯತೆ ಮೆರೆದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಾಮರಸ್ಯಕ್ಕೆ ಕೊಳ್ಳೆ ಇಟ್ಟ ಹಿಂದೂ ಸಂಘಟನೆಗಳ ಕುಕೃತ್ಯ ಖಂಡಿಸಿದ ಅಖಿಲ ಭಾರತ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಬಿ ವಿ ಶ್ರೀನಿವಾಸ, ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಯುವ ಕಾಂಗ್ರೆಸ್ ಪರವಾಗಿ ನಬಿಸಾಬನಿಗೆ 25 ಸಾವಿರ ರೂಪಾಯಿ ಪರಿಹಾರ ನೀಡಿದರು.
ನಬಿಸಾಬನ ಬದುಕು ಇದೀಗ ಬೀದಿಗೆ ಬಿದ್ದಿದ್ದು, ಬದುಕು ಕಟ್ಟಿಕೊಡಿ ಎಂದು ಅಂಗಲಾಚಿಕೊಳ್ಳುತ್ತಿದ್ದಾನೆ. ಪೊಲೀಸರು ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
Kshetra Samachara
10/04/2022 06:16 pm