ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಜೆಪಿ ದೇಶದಲ್ಲಿ ಪಿಕ್ ಪಾಕೇಟ್ ಸರ್ಕಾರ ನಡೆಸುತ್ತಿದೆ: ಹುಬ್ಬಳ್ಳಿಯಲ್ಲಿ ಕೈ ನಾಯಕನ ಆಕ್ರೋಶ !

ಹುಬ್ಬಳ್ಳಿ: ಹಿಂದೆಂದೂ ಕಂಡರಿಯದ ನಿಟ್ಟಿನಲ್ಲಿ ಬೆಲೆ ಏರಿಕೆ ಆಗಿದೆ. ಜನ ಜೀವನ ಇದರಿಂದ ದುಸ್ತರವೇ ಆಗಿದೆ ಎಂದು ಕಾಂಗ್ರೆಸ್ ಇಂದು ಆಕ್ರೋಶ ವ್ಯಕ್ತಪಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.

ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌, ದಿನಸಿ ಬೆಲೆ ಏರಿಕೆ ಆಗಿರುವುದನ್ನು ಖಂಡಿಸಿ ಅಡುಗೆ ಸಿಲಿಂಡರ್‌ನೊಂದಿಗೆ ನಗರದ ಅಂಬೇಡ್ಕರ್ ಸರ್ಕಲ್ ದಿಂದ ಚನ್ನಮ್ಮ ವೃತ್ತದವರೆಗೆ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಕಿಸೆಗೆ ಕೈ ಹಾಕಿ, ಬಡವರನ್ನು ಸಂಕಷ್ಟಕ್ಕೆ ದೂಡುತ್ತಿದ್ದು,'ಬಹುತ್‌ ಹೋಗಯಿ ಮೆಹಂಗಾಯಿ ಕೀ ಮಾರ್‌, ಅಬ್‌ ಕಿ ಬಾರ್‌ ಮೋದಿ ಸರ್ಕಾರ್‌' ಎಂದು ಅಧಿಕಾರಕ್ಕೆ ಬಂದವರು ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಪಿಕ್‌ ಪಾಕೇಟ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಯುವ ಘಟಕದ ರಾಜ್ಯ ಅಧ್ಯಕ್ಷ ಮಹ್ಮದ್‌ ನಲಪಾಡ್‌ ಆಕ್ರೋಶ ವ್ಯಕ್ತಪಡಿಸಿದರು.

ಅಡುಗೆ ಅನಿಲ, ಪೆಟ್ರೋಲ್‌, ಡಿಸೇಲ್‌, ದಿನಸಿ ಅಂಗಡಿಗಳ ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, 2014ರಿಂದ ಇದುವರೆಗೆ ಪ್ರಧಾನಿ, ಮಂತ್ರಿಗಳು ಸೇರಿ ಯಾರೊಬ್ಬರೂ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ. ಬೆಲೆ ಏರಿಕೆ ವಿರೋಧಿಸಿ ಈಗಾಗಲೇ ರಾಜ್ಯಾದ್ಯಂತ ಯುವ ಕಾಂಗ್ರೆಸ್‌ನಿಂದ ಪ್ರತಿ ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕು ನಡೆಸುವುದೇ ದುಸ್ತರವಾಗಿದೆ. ಸರ್ಕಾರ ಮಾತ್ರ ಕಣ್ಣು, ಕವಿ ಇಲ್ಲದಂತೆ ಸಾಗುತ್ತಿದೆ. ಜನರ ಪಾಕೆಟ್‌ನಿಂದ ದುಡ್ಡು ಕೀಳುತ್ತಿದೆ. ರಾಜ್ಯದ ಎಲ್ಲ ಯುವಪಡೆ ಇಂತ ಸುಳ್ಳು ಸರ್ಕಾರವನ್ನು ಕಿತ್ತೂಗೆಯಬೇಕು. ಆದ್ದರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಹಲಾಲ್‌, ಹಿಜಾಬ್‌, ಅಜಾನ್‌ ನಿನ್ನೆ ಮೊನ್ನೆಯಿಂದ ಆರಂಭವಾಗಿಲ್ಲ. ಹಲವಾರು ವರ್ಷದಿಂದ ನಡೆದುಕೊಂಡು ಬರುತ್ತಿವೆ. ಆದರೆ ಬಿಜೆಪಿಯವರು ಇಂಥ ವಿಷಯಗಳಿಗೆ ಪೋಷಣೆ ಕೊಟ್ಟು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ತಪ್ಪಿಸಲು ಬಿಜೆಪಿ ಕೋಮುಭಾವನೆ ಸೃಷ್ಟಿಯ ಅಡ್ಡ ಮಾರ್ಗ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುರಾನ್‌, ಭಗವದ್ಗೀತೆ, ಬೈಬಲ್‌ ಎಲ್ಲವೂ ನಮಗೆ ಸಂವಿಧಾನ. ನಾವೆಲ್ಲರೂ ಭಾರತೀಯರು, ಸಂವಿಧಾನದ ಅಡಿ ಸಾಗುತ್ತೇವೆ. ರಾಜ್ಯದ ಮನೆಮನೆಗೆ ಹೋಗಿ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸಿ, ಇದನ್ನು ಮೂಲದಿಂದಲೇ ಕಿತ್ತೂಗೆಯುತ್ತೇವೆ ಎಂದು ಹೇಳಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/04/2022 03:42 pm

Cinque Terre

49.02 K

Cinque Terre

17

ಸಂಬಂಧಿತ ಸುದ್ದಿ