ನವಲಗುಂದ : ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಶನಿವಾರ ನವಲಗುಂದ ಬ್ಲಾಕ್ ಕಾಂಗ್ರೆಸ್ ವತಿಯಿಂದ ನವಲಗುಂದ ಪೊಲೀಸ್ ಠಾಣೆಗೆ ತೆರಳಿ ಧರಣಿ ಪ್ರತಿಭಟನೆ ನಡೆಸಿ, ಮನವಿಯನ್ನು ಸಲ್ಲಿಸಲಾಯಿತು.
ಮೊದಲು ಪೊಲೀಸ್ ಇಲಾಖೆಯಲ್ಲಿ ಲಂಚ ಕೊಡದೇ ಯಾವುದೇ ಕೆಲಸ ಆಗಲ್ಲ ಎಂದು ಹೇಳಿಕೆ ನೀಡಿ ಪೊಲೀಸ್ಅಧಿಕಾರಿಗಳು ತಲೆ ತಗ್ಗಿಸುವಂತೆ ಈ ಹಿಂದೆ ಹೇಳಿಕೆ ನೀಡಿದ್ದು, ಈಗ ಗೃಹ ಇಲಾಖೆಯ ಸಚಿವರಾಗಿ ತನಿಖೆ ಹಂತದಲ್ಲಿರುವ ವಿವಿಧ ಪ್ರಕರಗಣಗಲ್ಲಿ ಗೊಂದಲದ ಹೇಳಿಕೆ ನೀಡಿ ಇಲಾಖೆಯ ಗೌರವ ಕಡಿಮೆ ಮಾಡುತ್ತಿದ್ದಾರೆ. ಹಿಂದೂ-ಅಲ್ಪಸಂಖ್ಯಾತರು ಅಣ್ಣ ತಮ್ಮದಿರಂತೆ ಬಾಳುತ್ತಿದ್ದು, ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿಯವರು ಕೆಲ ಸಮುದಾಯಗಳ ವಿರುದ್ಧ ಸಚಿವರು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಇತರರು ದಿನಕ್ಕೊಂದು ಹೇಳಿಕೆ ನೀಡಿ, ಕಾನೂನು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಭಾಗವಾಗಿರುವ ಸಚಿವರು, ಶಾಸಕರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಗೃಹ ಸಚಿವರ ಕಾರ್ಯ ವೈಖರ್ಯ ಬಗ್ಗೆ ರಾಜ್ಯದ ಜನತೆ ವಿರೋಧ ವ್ಯಕ್ತಪಡಿಸುತ್ತಿದ್ದು, ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನವಲಗುಂದ ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಒತ್ತಾಯಿಸಿ, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಎಫ್.ಐ ಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಯ ಎ.ಎಸ್.ಐ ಮೇಟಿಯವರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅನೀಲಕುಮಾರ ಪಾಟೀಲ, ಕೆ.ಎನ್. ಗಡ್ಡಿ, ವಿನೋದ ಅಸೂಟಿ, ವರ್ಧಮಾನಗೌಡ ಹಿರೇಗೌಡ್ರ, ಶಿವಾನಂದ ಕರಿಗಾರ, ಅಪ್ಪಣ್ಣ ಹಳ್ಳದ, ಶಿವಾನಂದ ತಡಸಿ, ಹನಮಂತ ವಾಲಿಕಾರ, ಸುರೇಶ ಮೇಟಿ, ಮೊದೀನಸಾಬ ಶಿರೂರ, ಮಹಾಂತೇಶ ಭೋವಿ, ಶ್ರೀಮತಿಹುಸೇನಬಿ ಧಾರವಾಡ, ಉಸ್ಮಾನ ಬಬರ್ಚಿ, ಸಿದ್ದಲಿಂಗಪ್ಪ ಮದ್ದೂರ, ರಾಜು ದೊಡ್ಡಮನಿ, ಶರೀಫಸಾಬ ಗುದಗಿ, ಹನಮಂತ ಮಾಳಗಿ, ಸುಲೇಮಾನ ನಾಶಿಪುಡಿ, ಈರಣ್ಣ ಶಿಡಗಂಟಿ, ಅಡಿವೆಪ್ಪ ಗಾಣಿಗೇರ, ನಾರಾಯಣ ರಂಗರಡ್ಡಿ, ಶರಣು ಯಮನೂರ, ಸುರೇಶ ಬೆಟಸೂರ, ಚಂದ್ರು ಅಣ್ಣಿಗೇರಿ, ಮಾಬುಸಾಬ ಮುಲ್ಲಾನವರ, ಮಡಿವಾಳರ, ಶ್ರೀಮತಿ ಪದ್ದವ್ವ ಕಾಲವಾಡ, ನಂದಿನಿ ಹಾದಿಮನಿ ಹಾಗೂ ಇತರರು ಉಪಸ್ಥಿತರಿದ್ದರು.
Kshetra Samachara
09/04/2022 08:36 pm