ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿದ್ದರಾಮಯ್ಯಗೆ ಹಾಲಪ್ಪ ಆಚಾರ್ ತಿರುಗೇಟು

ಧಾರವಾಡ: ಅಲ್‌ಖೈದಾ ಉಗ್ರ ಮಾಡಿದ ವಿಡಿಯೋ ಆರ್‌ಎಸ್‌ಎಸ್ ಪ್ರೇರೇಪಿತ ವಿಡಿಯೋ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಮಾತನಾಡಲು ಏನೂ ವಿಷಯ ಇಲ್ಲ ಎಂಬಂತೆ ಕಾಣುತ್ತದೆ. ಸುಮ್ಮನೆ ಎಲ್ಲ ವಿಷಯಕ್ಕೂ ಆರ್‌ಎಸ್‌ಎಸ್, ಬಿಜೆಪಿಯವರು ಎಂದು ಬಡಬಡಿಸುತ್ತಾರೆ. ಅವರಿಗೆ ಅದು ರೂಢಿಯಾಗಿಬಿಟ್ಟಿದೆ. ಅಲ್‌ಖೈದಾ ಉಗ್ರನ ವಿಡಿಯೋವನ್ನು ಆರ್‌ಎಸ್‌ಎಸ್ ಬಿಡುಗಡೆ ಮಾಡುತ್ತಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ಈಗ ಹೊಟ್ಟೆ ನೋವು ಶುರುವಾಗಿದೆ. ಹೊಟ್ಟೆ ನೋವಿನಿಂದ ಕಾಂಗ್ರೆಸ್ ನಾಯಕರು ಹೀಗೆಲ್ಲ ಹೇಳಿಕೆ ನೀಡುತ್ತಿದ್ದಾರೆ. ಆರ್‌ಎಸ್‌ಎಸ್ ಇಂತಹುದೆಲ್ಲ ಪ್ರಶ್ನೆ ಮಾಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಮಾತನಾಡುವುದೆಲ್ಲ ನಿರಾಧಾರ ಎಂದರು.

ಎಲ್ಲರೂ ಹಿಂದಿ ಕಲಿಯಬೇಕು ಎಂಬ ಅಮಿತ್ ಷಾ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಹಿಂದಿ ಭಾಷೆ ಹೇರಿಕೆ ಎಂದು ಏಕೆ ಭಾವಿಸಬೇಕು? ಇಂದು ರಾಷ್ಟ್ರದೆಲ್ಲೆಡೆ ಹಿಂದಿ ಭಾಷೆ ಸಾಮಾನ್ಯ ಭಾಷೆಯಾಗಿದೆ. ಅದಕ್ಕಾಗಿ ಎಲ್ಲರೂ ಹಿಂದಿ ಮಾತನಾಡಬೇಕು. ನಾವು ಕರ್ನಾಟಕದಲ್ಲಿ ಕನ್ನಡ ಮಾತನಾಡೋದಿಲ್ವಾ? ಯುಪಿ, ಬಿಹಾರ್‌ದಿಂದ ಬಂದವರಿಗೆ ಕನ್ನಡ ಕಡ್ಡಾಯ ಎಂದು ಹೇಳುತ್ತೇವೆ. ಅದನ್ನು ಹೇರಿಕೆ ಎನ್ನಲು ಆಗುವುದಿಲ್ಲ. ಹಿಂದಿ ಕಡ್ಡಾಯವಾಗಿ ಮಾತನಾಡಿ ಎಂದು ಅಮಿತ್ ಷಾ ಹೇಳಿಲ್ಲ. ಎಲ್ಲರೂ ಹಿಂದಿ ಕಲಿಯಿರಿ ಎಂದಿದ್ದಾರಷ್ಟೇ. ವಿಶಾಲವಾದ ಜಗತ್ತಿನಲ್ಲಿ ನಮ್ಮ ಮಕ್ಕಳು ಎಲ್ಲ ಭಾಷೆ ಕಲಿಯಬೇಕು ಎಂದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/04/2022 06:55 pm

Cinque Terre

54.47 K

Cinque Terre

2

ಸಂಬಂಧಿತ ಸುದ್ದಿ