ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾನು ಸಚಿವ ಸ್ಥಾನದ ಆಕಾಂಕ್ಷಿ: ಡಿಸಿಎಂ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದ ಬೆಲ್ಲದ..!

ಹುಬ್ಬಳ್ಳಿ: ನನಗೂ ಕೂಡ ಸಚಿವನಾಗಬೇಕೆಂಬ ಆಸೆ ಇದೆ. ಕೇವಲ ನನಗಷ್ಟೇ ಅಲ್ಲ ಯಾವುದೇ ಒಬ್ಬ ಶಾಸಕನಾದವನಿಗೂ ಸಚಿವನಾಗಬೇಕಂಬ ಆಸೆ ಇರುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ರಾಜಕೀಯ ಅಂದ್ರೆ ದೆಹಲಿ ಮಟ್ಟದಲ್ಲಿ ಲಾಭಿ ಇದ್ದೆ ಇರುತ್ತದೆ. ನಮ್ಮ ಹೈಕಮಾಂಡ ಅವರದ್ದೇ ಲೆಕ್ಕಾಚಾರದ ಮೇಲೆ ಸಚಿವ ಸ್ಥಾನವನ್ನ ನೀಡುತ್ತಾರೆ. ಈಗಾಗಲೇ ಉತ್ತರ ಭಾರತದ ಎಲ್ಲಾ ಚುನಾವಣೆ ಮುಗಿದಿವೆ. ಹೈಕಮಾಂಡ್ ಗಮನ ದಕ್ಷಿಣ ಭಾರತದ ಮೇಲೆ ಇದೆ. ಈಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.

ಮೂರು ಜನರನ್ನು ಡಿಸಿಎಮ್ ಸೃಷ್ಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಮಾಧ್ಯಮಗಳ ಸೃಷ್ಟಿ.

ಹೈಕಮಾಂಡ್ ಏನು ಮಾಡುತ್ತಾರೆ ಅವರಿಗೆ ಗೊತ್ತು. ಅವರನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಸಚಿವ ಸಂಪುಟದಲ್ಲಿ ಹಿರಿಯರು ಇರಬೇಕು, ಯುವಕರು ಇರಬೇಕು. ಯುವಕರಿಗೆ ಮತ್ತು ಹೊಸ ಮುಖಗಖಿಗೆ ಚೆನ್ನಾಗಿರುತ್ತದೆ. ನನಗೂ ಕೂಡ ಪಾಸಿಟಿವ್ ಫಲಿತಾಂಶ ನಿರೀಕ್ಷೆಯಲ್ಲಿದ್ದೇನೆ. ಇದು ಎಲ್ಲವೂ ಹೈಕಮಾಂಡಗೆ ಬಿಟ್ಟ ವಿಚಾರ. ನಾನು ಸಚಿವ ಸ್ಥಾನಕ್ಕಾಗಿ ದೆಹಲಿ ಭೇಟಿ ನೀಡಿಲ್ಲ, ಅನ್ಯ ಕಾರ್ಯದ ನಿಮಿತ್ತವಾಗಿ ದೆಹಲಿಗೆ ಭೇಟಿ ನೀಡಿದ್ದೆ. ಎಲ್ಲರೂ ಸಚಿವ ಸ್ಥಾನಕ್ಕಾಗಿ ಲಾಭಿ ಮಾಡುವುದು ಸಹಜ, ನಾನೂ ಸಹ ಪ್ರಯತ್ನ ನಡೆಸಿದ್ದೇನೆ. ಸಚಿವ ಸಂಪುಟದಲ್ಲಿ ಕೇವಲ ಹಿರಿಯರು ಇದ್ದರೂ ನಡೆಯುವುದಿಲ್ಲ, ಯುವಕರು ಇದ್ದರು ನಡೆಯುವುದಿಲ್ಲ ಇಲ್ಲಿ ಕಾಂಬಿನೇಷನ್ ಅತಿ ಅವಶ್ಯ ಎಂದರು.

ನಾನೂ ಡಿಸಿಎಮ್ ಅಥವಾ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಏನೂ ಇಲ್ಲದಿದ್ದರೂ ಶಾಸಕನಾಗಿ ನನ್ನ ಕ್ಷೇತ್ರದ ಕೆಲಸ ಮಾಡುತ್ತೇನೆ. ಮಸೀದಿಗಳ ಮೈಕ್ಗಳನ್ನ ತೆರವುಗೊಳಿಸಬೇಕು. ಈಗಂತೂ ಮುಂಜಾನೆ 3 ಗಂಟೆಗೆ ಮೈಕ್ ಹಚ್ಚುತ್ತಿದ್ದಾರೆ, ಆದ್ದರಿಂದ ಅದನ್ನ ತೆಗೆದು ಹಾಕಬೇಕು. ಮಸೀದಿಗಳ ಮೇಲಿನ ಮೈಕ್ಗಳನ್ನ ಬಂದ್ ಮಾಡಲು ನಂದು ಸಹಮತ ಇದೆ. ದೇವಸ್ಥಾನಗಳನ ಮೇಲಿನ ಮೈಕ್ಗಳ ಮೇಲಿನ ಮೈಕ್ಗಳನ್ನ ತೆಗೆದು ಹಾಕಲಿ. ಅನಾವಶ್ಯಕ ಮೈಕ್ಗಳನ್ನ ಎಲ್ಲವನ್ನೂ ತೆರವುಗೊಳಿಸಲಿ. ಮಸೀದಿಗಳ ಮೇಲಿನ ಮೈಕ್ ಬಂದ್ ಆದರೆ ದೇವಸ್ಥಾನಗಳ ಮೇಲಿನ ಮೈಕ್ಗಳು ತಮ್ಮಿಂದ ತಾವೇ ಬಂದ ಆಗುತ್ತವೆ. ಶಬ್ದ ಮಾಲಿನ್ಯ ಆಗುತ್ತಿರುವುದು ದೇವಸ್ಥಾನಗಳ ಮೈಕ್ನಿಂದ ಅಲ್ಲಾ, ಮಸೀದಿಗಳ ಮೇಲಿನ ಮೈಕಗಳಿಂದ ಎಂದು ಹೇಳುವ ಮೈಕ್ಗಳ ಬಗ್ಗೆ ಬೆಲ್ಲದ ದ್ವಂದ್ವ ಹೇಳಿಕೆ ನೀಡಿದರು.

ಮೈಕ್ ಗಳನ್ನ ಬಂದ್ ಮಾಡುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ. ಮೈಕ್ಗಳ ವಿಚಾರ ಸುಪ್ರೀಂ ಕೋರ್ಟ್ ನೋಡುವ ಅವಶ್ಯಕತೆ ಇಲ್ಲ. ನಮ್ಮ ಕಾರ್ಯ ಕ್ಷೇತ್ರದಲ್ಲಿ ಏನೂ ಇದೆಯೋ ಆ ನಿರ್ಧಾರವನ್ನ ನಾವು ತೆಗೆದುಕೊಳ್ಳಬಹುದು ಎಂದರು.

Edited By :
Kshetra Samachara

Kshetra Samachara

07/04/2022 09:59 pm

Cinque Terre

65.81 K

Cinque Terre

24

ಸಂಬಂಧಿತ ಸುದ್ದಿ