ಧಾರವಾಡ: ಧಾರವಾಡದ ಶ್ರೀನಗರ ಸರ್ಕಲ್‌ನಲ್ಲಿರುವ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಗಲಾಟೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ರಾತ್ರೋರಾತ್ರಿ ಇಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಬಸವೇಶ್ವರ ಮೂರ್ತಿಯನ್ನು ನಿನ್ನೆಯಷ್ಟೇ ಪಾಲಿಕೆ ತೆರವುಗೊಳಿಸಿತ್ತಾದರೂ ಇಂದು ಸ್ಥಳೀಯರು ಪುನಃ ಅದೇ ಸ್ಥಳದಲ್ಲಿ ಅದೇ ಮೂರ್ತಿ ತಂದಿಟ್ಟು ಪಾಲಿಕೆಗೆ ಸೆಡ್ಡು ಹೊಡೆದಿದ್ದಾರೆ.
ಧಾರವಾಡದ ಶ್ರೀನಗರ ಸರ್ಕಲ್ ಒಂದೆಡೆ ಧಾರವಾಡ-ಹಳಿಯಾಳ ರಸ್ತೆ, ಮಗದೊಂದು ಕಡೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಲಿಂಕ್ ಕಲ್ಪಿಸುವ ಮಹತ್ವದ ವೃತ್ತ. ಇಲ್ಲಿ ಮೊದಲಿನಿಂದಲೂ ವೃತ್ತ ಇತ್ತು. ಆದರೆ ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಈ ವೃತ್ತ ತೆರವುಗೊಳಿಸಲು ಮುಂದಾಗಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ಇಲ್ಲಿ ರಾತ್ರೋರಾತ್ರಿ ಬಸವೇಶ್ವರ ಮೂರ್ತಿ ತಂದಿಡಲಾಗಿತ್ತು. ಆದರೆ ಅದನ್ನು ತೆರವುಗೊಳಿಸಿದ ಪಾಲಿಕೆ ಮೂರ್ತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಇಂದು ಪಾಲಿಕೆಯ ವಲಯ ಕಚೇರಿಗೆ ತೆರಳಿದ ಸ್ಥಳೀಯರು, ಮುಚ್ಚಳಿಕೆ ಬರೆದುಕೊಟ್ಟು ಮೂರ್ತಿ ತಂದು ಪುನಃ ಇದೇ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಹ ಸಲ್ಲಿಸಿದರು.
ಪಾಲಿಕೆ ಸಿಬ್ಬಂದಿ ಪುನಃ ತೆರವುಗೊಳಿಸಲು ಬಂದಾಗ, ಸ್ಥಳೀಯರು ವಿರೋಧ ವ್ಯಕ್ತಪಡಿಸಲಾರಂಭಿಸಿದರು. ಸ್ಥಳಕ್ಕೆ ವಿವಿಧ ಮಠಾಧೀಶರು ಹಾಗೂ ಸಮಾಜದ ಮುಖಂಡರು ಸಹ ಆಗಮಿಸಿ ಪ್ರತಿಮೆ ತೆರವುಗೊಳಿಸಿದಂತೆ ಪಟ್ಟು ಹಿಡಿದರು. ಜನ ಸೇರಿದ್ದರಿಂದ ಪೊಲೀಸ ಬಂದೋಬಸ್ತ ಸಹ ಹೆಚ್ಚಾಗಿ ಕೆಲಹೊತ್ತು ಗೊಂದಲದ ವಾತಾವರಣವೂ ಸೃಷ್ಟಿಯಾಗಿತ್ತು. ಕೊನೆಗೆ ನಾಳೆ ಸಂಜೆ 5ರೊಳಗೆ ಮೂರ್ತಿ ತೆಗೆಯಬೇಕು ಎಂದು ಸ್ಥಳೀಯರಿಗೆ ಗಡುವು ನೀಡಿದ ಆಯುಕ್ತರು ಸುಪ್ರಿಂಕೋರ್ಟ್ ಆದೇಶದ ಬಳಿಕ ಸರ್ಕಾರಿ ಸ್ಥಳದಲ್ಲಿ ಯಾವುದೇ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ತೆಗೆಯಲೇಬೇಕು ಎಂದು ಹೇಳಿದ್ರು ಆದ್ರೆ ಇದಕ್ಕೆ ಒಪ್ಪದ ಸ್ಥಳೀಯರು, ಈ ವೃತ್ತ ಇಲ್ಲಿ ಮೊದಲಿನಿಂದಲೂ ಇದೆ. ಇಲ್ಲಿ ಬಸವೇಶ್ವರ ಮೂರ್ತಿ ಸ್ಥಾಪಿಸುವ ಯೋಚನೆ ಮೊದಲಿನಿಂದಲೂ ಇತ್ತು. ಯಾವುದೇ ಕಾರಣಕ್ಕೂ ತೆರವು ಮಾಡಬೇಡಿ ಅಂತಾ ಪಟ್ಟು ಹಿಡಿದಿದ್ದಾರೆ.
Kshetra Samachara
03/04/2022 10:27 pm