ನವಲಗುಂದ : ಒಪ್ಪಂದದ ಪ್ರಕಾರ ನವಲಗುಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಈಗ ಕೇವಲ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಉಪಾಧ್ಯಕ್ಷ ಸ್ಥಾನಕ್ಕೆ ಇದುವರೆಗೂ ಯಾವುದೆ ನಿರ್ಣಯವನ್ನು ಕಾಂಗ್ರೆಸ್ ನವರು ತೆಗೆದುಕೊಂಡಿಲ್ಲ. ನಮಗೆ ಈಗ ಸ್ಪಷ್ಟತೆ ಬೇಕಾಗಿದೆ ಎಂದು ಹಿರಿಯ ಬಿಜೆಪಿ ಕಾರ್ಯಕರ್ತರಾದ ರಾಯನಗೌಡ ಬಸವನಗೌಡ ಪಾಟೀಲ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಘೋಷ್ಟಿ ನಡೆಸಿ ಮಾತನಾಡಿದ ಅವರು, ಒಪ್ಪಂದದ ಪ್ರಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಈಗ ಕೇವಲ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಉಪಾಧ್ಯಕ್ಷ ಸ್ಥಾನಕ್ಕೆ ಇದುವರೆಗೂ ಯಾವುದೆ ನಿರ್ಣಯವನ್ನು ಕಾಂಗ್ರೆಸ್ ನವರು ತೆಗೆದುಕೊಂಡಿಲ್ಲ. ನಮಗೆ ಈಗ ಸ್ಪಷ್ಟತೆ ಬೇಕಾಗಿದೆ. ನಾವು ಅವರು ಕೂತು ಮಾತನಾಡಿದ ಒಡಂಬಡಿಕೆಯನ್ನು ಮುಂದುವರೆಸುವುದು ಹೇಗೆ..? ಮುಂದುವರೆಸಬೇಕೋ ಬೇಡವೋ ಎನ್ನುವ ಸ್ಪಷ್ಟತೆ ಸಲುವಾಗಿ ನಾವು ಧರಣಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ಬಸವರಾಜ ಕಟ್ಟಿಮನಿ, ಮಂಜುನಾಥ ಜಾಧವ ರಾಜೀನಾಮೆ ವಿಚಾರ ಸಾಮಾಜಿಕ ಜಾಲತಾಣಗಳಿಂದ ತಿಳಿದಿದೆ. ಅಧಿಕೃತವಾಗಿ ನನ್ನನ್ನು ಕಾಂಗ್ರೇಸ್ ನಾಯಕರಾಗಲಿ, ಮಂಜುನಾಥ ಜಾದವ ಅವರಾಗಲಿ ಸಂಪರ್ಕಿಸಿ ವಿಷಯ ತಿಳಿಸಿಲ್ಲ. ಪುರಸಭೆ ಉಪಾದ್ಯಕ್ಷರು ರಾಜೀನಾಮೆ ನೀಡುವವರೆಗೂ ನಾನು ಕೂಡ ಸ್ಥಾಯಿ ಸಮಿತಿಗೆ ರಾಜೀನಾಮೆ ನೀಡುವದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಯನಗೌಡ ಬಸನಗೌಡ ಪಾಟೀಲ, ಅಣ್ಣಪ್ಪ ಬಾಗಿ, ಶಂಕರಣ್ಣ ತೋಟದ, ನಾಗೇಶ್ ಬೇಂಡಿಗೇರಿ, ಮಹಂತೇಶ ಕಲಾಲ್, ಪ್ರಭುಗೌಡ ಇಬ್ರಾಹಿಂಪುರ, ವಿಜಯ ಕಲಾಲ, ಜ್ಯೋತಿ ಗೊಲ್ಲರ, ಎಂ.ಬಿ ತೋಟಿ, ಗೀತಾ ಜನ್ನರ, ಪ್ರಕಾಶ ಪಾಚಂಗಿ, ಕಿರಣ ಕಲಾಲ, ಸಿದ್ದಪ್ಪ ಜನ್ನರ್ ಉಪಸ್ಥಿತರಿದ್ದರು.
Kshetra Samachara
29/03/2022 01:03 pm