ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೇಕೇ ಬೇಕು ನ್ಯಾಯ ಬೇಕು, ಮತ್ತೆ ಹೋರಾಟಕ್ಕಿಳಿದ ಟಾಟಾ ಮಾರ್ಕೊಪೊಲೊ ಕಾರ್ಮಿಕರು

ಧಾರವಾಡ: ಸದಾ ಹೋರಾಟದ ಮೂಲಕವೇ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತ ಬಂದಿರುವ ಟಾಟಾ ಮಾರ್ಕೊಪೊಲೊ ಕಂಪೆನಿ ಉದ್ಯೋಗಿಗಳು ಇದೀಗ ಮತ್ತೆ ಕೆಲವೊಂದಿಷ್ಟು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕಂಪೆನಿ ಆಡಳಿ ಮಂಡಳಿ ವಿರುದ್ಧ ಧರಣಿಗೆ ಮುಂದಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ವೇತನ ಪರಿಷ್ಕರಣೆಯನ್ನೇ ಮಾಡದೇ ಬಾಕಿ ಇರಿಸಿಕೊಳ್ಳಲಾಗಿದೆ. ಹಾಲಿ ಕಾರ್ಮಿಕರ ವೇತನವನ್ನು 23 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ ಮಾಡಬೇಕು, ಕಾರ್ಮಿಕರ ಎಲ್ಲಾ ಸೌಲಭ್ಯದ ಭತ್ಯೆಗಳನ್ನು ಎರಡುಪಟ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿ ಇದೀಗ ಕಾರ್ಮಿಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ವೇತನ ಒಪ್ಪಂದಕ್ಕೆ ಕೂಡಲೇ ಸಹಿ ಹಾಕಿ ಹೊಸ ವೇತನ ಒಪ್ಪಂದವನ್ನು ಏ.1 ರಿಂದ ಜಾರಿಗೆ ತರಬೇಕು, ವಜಾಗೊಳಿಸಿದ್ದ 7 ಜನ ಕಾರ್ಮಿಕರನ್ನು ನ್ಯಾಯಾಲಯದ ಆದೇಶದ ಪ್ರಕಾರ ಕೆಲಸಕ್ಕೆ ತೆಗೆದುಕೊಳ್ಳಬೇಕು, ಬಸ್ ಸಾರಿಗೆ ಸೌಲಭ್ಯವನ್ನು ಸುತ್ತಲೂ 60 ಕಿಲೋ ಮೀಟರ್‌ವರೆಗೆ ವಿಸ್ತರಿಸಬೇಕು, ಕಾರ್ಮಿಕರ ತಂದೆ, ತಾಯಿಗೂ ವೈದ್ಯಕೀಯ ವಿಮಾ ಸೌಲಭ್ಯ ಒದಗಿಸಬೇಕು, ಆರೋಗ್ಯ ಪೂರ್ಣ ಪೌಷ್ಠಿಕ ಆಹಾರ ಒದಗಿಸಲು ಸುಸಜ್ಜಿತ ಕ್ಯಾಂಟಿನ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕಾರ್ಮಿಕರಿಗೆ ವಿನಾಕಾರಣ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕಾರ್ಮಿಕರು ಧರಣಿ ಕೈಗೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

29/03/2022 12:47 pm

Cinque Terre

31.31 K

Cinque Terre

32

ಸಂಬಂಧಿತ ಸುದ್ದಿ