ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾನು ಯಾರನ್ನೂ ಸಚಿವನಾಗಲು ಭೇಟಿ ಮಾಡಲ್ಲ; ಅರವಿಂದ ಬೆಲ್ಲದ

ಧಾರವಾಡ: ಬಿ.ವೈ. ವಿಜಯೇಂದ್ರ ದೆಹಲಿ ಭೇಟಿ‌ ವಿಚಾರವಾಗಿ, ನಡ್ಡಾ ಅವರು ವಿಜಯೇಂದ್ರ ಅವರನ್ನು ಯಾಕೆ ಭೇಟಿ ಮಾಡಿದ್ದಾರೆ ಎಂದು ಗೊತ್ತಿಲ್ಲ. ಬೇರೆ ಕಾರಣಕ್ಕೆ ಕೂಡ ಭೇಟಿ ಮಾಡಿರಬಹುದು ಎಂದು ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನು ಯಾರನ್ನೂ ಸಚಿವನಾಗಲು ಭೇಟಿ ಮಾಡಲ್ಲ. ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಅಷ್ಟೇ.

ಈಗಾಗಲೇ ನಾವು 4 ರಾಜ್ಯಗಳಲ್ಲಿ ಗೆದ್ದಿದ್ದೇವೆ. ಮೋದಿ, ಅಮಿತ್ ಷಾ, ನಡ್ಡಾ ಅವರ ಪರಿಶ್ರಮದಿಂದಾಗಿ ಬಹುಮತದಿಂದ ಗೆದ್ದಿದ್ದೇವೆ. ನಮ್ಮ ಪಕ್ಷದ ನಾಯಕರು ಪ್ರತಿ ಚುನಾವಣೆ ಪ್ಲಾನ್ ಮೂಲಕ ಎದುರಿಸುತ್ತಾರೆ. ನಮ್ಮೆಲ್ಲ ನಾಯಕರೂ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದರು.

ನಮ್ಮ ರಾಜ್ಯದ ಚುನಾವಣೆ ಕೂಡ ಇದೇ ರೀತಿ ಆಗುತ್ತದೆ. ನಮ್ಮ ನಾಯಕರು, ಕಾರ್ಯಕರ್ತರು ಸಮರ ಸನ್ನದ್ಧರಾಗಿದ್ದೇವೆ. 2023ರಲ್ಲಿಯೂ ಬಿಜೆಪಿ ಬಹುಮತದಿಂದ ಗೆಲ್ಲುತ್ತವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

13/03/2022 07:20 pm

Cinque Terre

30.56 K

Cinque Terre

0

ಸಂಬಂಧಿತ ಸುದ್ದಿ