ಬೆಂಗಳೂರು: ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಧಾರವಾಡದ ಎಸ್ಪಿ ಅಟ್ರಾಸ್ಟಿ ಕೇಸ್ ದಾಖಲಿಸಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು ಅಂತಲೇ ಮೇಲ್ಮನೆಯಲ್ಲಿ ಸದಸ್ಯರು ಒಕ್ಕೋರಲಿನಿಂದಲೇ ಒತ್ತಾಯಿಸಿದ್ದಾರೆ.
ಪೊಲೀಸರು ಉದ್ಘಟತನ ತೋರಿದ್ದಾರೆ. ಸಂವಿಧಾನ ಪೀಠಕ್ಕೆ ಅಗೌರವ ತೋರಿದ್ದಾರೆ.ಹಾಗಾಗಿಯೇ ಧಾರವಾಡ ಎಸ್ಪಿ ಅನ್ನ ಅಮಾನತ್ತುಗೊಳಿಸಬೇಕೆಂದು ಮೇಲ್ಮನೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾಂಗ್ರೆಸ್ ಮುಖಂಡರು ಸರ್ಕಾರವನ್ನ ಆಗ್ರಹಿಸಿದ್ದಾರೆ.
ಸಭಾಪತಿ ಬಸವರಾಜ್ ಹೊರಟ್ಟಿ ಈ ವೇಳೆ ಮಧ್ಯೆ ಪ್ರವೇಶಿಸಿದರು. ನಾನು ಬೆಂಗಳೂರಿನಲ್ಲಿದ್ದೇ. ರಾತ್ರಿ 12 ಗಂಟೆಗೆ ಪ್ರಕರಣ ದಾಖಲಾಗಿದೆ. ಮಧ್ಯ 3 ಗಂಟೆಗೆ ಧಾರವಾಡ ಎಸ್ಪಿ ಪೋನ್ ಮಾಡಿ ತಿಳಿಸಿದರು.ಆಗ ನನ್ನ ಜೊತೆಗೆ ಗೃಹ ಸಚಿವರು ಮಾತನಾಡಿ ಪ್ರಕರಣ ವಿವರ ಕೊಟ್ಟರು.ಆದರೆ ಈಗ ಈ ಪೀಠದಲ್ಲಿ ಕುಳಿತು ಈ ಬಗ್ಗೆ ಇಲ್ಲಿ ಚರ್ಚಿಸೋದು ಸರಿಯಲ್ಲ ಅಂತಲೇ ಹೇಳಿ ತಮ್ಮ ಕೊಠಡಿಗೆ ತೆರಳಿದರು.
Kshetra Samachara
11/03/2022 01:33 pm