ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ಪ್ರಾಮುಖ್ಯತೆ ನೀಡಿ

ಧಾರವಾಡ: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಹಿರಿಯ ವಕೀಲ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್ ನೀರಲಕೇರಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ನೀಡಿದ್ದ ಭರವಸೆಗಳು ಧಾರವಾಡ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿವೆ. ಆದ್ದರಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕು.

ವಿಶೇಷವಾಗಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಿಮ್ಸ್ , ಜಿಲ್ಲಾ ಆಸ್ಪತ್ರೆ, ಡಿಮಾನ್ಸ್‌ಗಳ ಸುಧಾರಣೆಗೆ ಅಗತ್ಯ ಅನುದಾನ ನೀಡಬೇಕು.

ಈ ವರ್ಷವೇ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು. ರಸ್ತೆ ಸಂಪರ್ಕ ಸುಧಾರಣೆ ನಿಟ್ಟಿನಲ್ಲಿ‌ ಅವಳಿ ನಗರ ಒಳಗೊಂಡ ವರ್ತುಲ ರಸ್ತೆ ನಿರ್ಮಾಣ, ಧಾರವಾಡ ಅಳ್ನಾವರ ರಸ್ತೆಯಲ್ಲಿನ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ‌ ಸಂಶೋಧನೆ ಮತ್ತು ಇತರ‌ ಅಧ್ಯಯನ ಚಟುವಟಿಕೆಗಳಿಗೆ ಅಗತ್ಯ ಆರ್ಥಿಕ ನೆರವು ಕಲ್ಪಿಸಬೇಕು.

ಶಿಕ್ಷಣ ಕಾಶಿ ಧಾರವಾಡಕ್ಕೆ ವಿದ್ಯಾರ್ಥಿಗಳ, ಅನುಕೂಲಕ್ಕೆ ಹೆಚ್ಚು ವಸತಿ ನಿಲಯ‌ಗಳನ್ನು ಸ್ಥಾಪಿಸಲು ಅಗತ್ಯ ಕ್ರಮಕೈಕೊಳ್ಳಬೇಕು.

ನಿರುದ್ಯೋಗದಿಂದ ಕಂಗೆಟ್ಟಿರುವ ಯುವಕರಿಗೆ ಉದ್ಯೋಗ ಒದಗಿಸಲು ಆಸಕ್ತಿ ತೋರಿಸಬೇಕು.

ಧಾರವಾಡ ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಜಿಲ್ಲೆಯವರೇ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ‌ಜಗದೀಶ ಶೆಟ್ಟರ್ ಮತ್ತು ಜನಪ್ರತಿನಿಧಿಗಳು ಕಾರ್ಯೋನ್ಮುಖ ಆಗಬೇಕು ಎಂದು

ನೀರಲಕೇರಿ ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

22/02/2022 10:13 am

Cinque Terre

37.28 K

Cinque Terre

1

ಸಂಬಂಧಿತ ಸುದ್ದಿ