ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ತಹಶೀಲ್ದಾರ ನಡೆ ಸಾಸ್ವಿಹಳ್ಳಿ ಗ್ರಾಮದ ಕಡೆ

ಅಣ್ಣಿಗೇರಿ: ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿ ತಿಂಗಳು ತಿಂಗಳು ಮೂರನೇ ಶನಿವಾರದಂದು ತಾಲೂಕಿನ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕೆಂಬ ಆದೇಶದ ಮೇರೆಗೆ ಇಂದು ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ತಾಲೂಕು ತಹಶೀಲ್ದಾರ್ ಮಂಜುನಾಥ್ ಅಮಾಸೆ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಈ ಹಿನ್ನೆಲೆ ಗ್ರಾಮದ ಸಾರ್ವಜನಿಕರು ಗ್ರಾಮದಲ್ಲಿ ಸಿಸಿ ರೋಡ್, ಕೆರೆ ದುರಸ್ತಿ, ಗ್ರಾಮದ ಶಾಲೆಗೆ ಶಿಕ್ಷಕರ ಕೊರತೆ ಹಾಗೂ ವಿದ್ಯುತ್ ಕಂಬ,ಟಿಸಿ ಬದಲಾವಣೆ ಬಗ್ಗೆ ತಹಶೀಲ್ದಾರ್ ಅವರ ಜೊತೆ ಗ್ರಾಮಸ್ಥರು ಚರ್ಚಿಸಿದರು. ಸಾರ್ವಜನಿಕರಿಗೆ ಇವೆಲ್ಲಾ ಸಮಸ್ಯೆಗಳಿಂದ ತುಂಬಾ ತೊಂದರೆಗಳು ಉಂಟಾಗುತ್ತವೆ ಎಂದು ಸಾರ್ವಜನಿಕರು ಹೇಳಿಕೊಂಡರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಬರುವ ದಿನಗಳಲ್ಲಿ ಇಲ್ಲಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಬರುವ ದಿನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಾ ಅಥವಾ ಸಮಸ್ಯೆ ಸಮಸ್ಯೆಯಾಗಿ ಉಳಿಯುತ್ತಾ ಎಂಬುದು ಕಾದುನೋಡಬೇಕಾಗಿದೆ.

ವರದಿ: ಬಿ.ನಂದೀಶ ಪಬ್ಲಿಕ್ ನೆಕ್ಸ್ಟ್, ಅಣ್ಣಿಗೇರಿ

Edited By : Shivu K
Kshetra Samachara

Kshetra Samachara

19/02/2022 05:35 pm

Cinque Terre

14.95 K

Cinque Terre

0

ಸಂಬಂಧಿತ ಸುದ್ದಿ