ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಟ್ರಾಸಿಟಿ ಕಾಯ್ದೆ ದುರ್ಬಳಕೆ ತಡೆಗೆ ಕ್ರಮ ಅಗತ್ಯ : ವೀರಶೈವ ಮಹಾಸಭಾ

ಕುಂದಗೋಳ : ಅಟ್ರಾಸಿಟಿ ಕಾಯ್ದೆಯ ದುರ್ಬಳಕೆ ಸಲ್ಲದು ಲಿಂಗಾಯತ ಒಳಪಂಗಡ ಸಹಿತ ವಿವಿಧ ಜಾತಿಗಳ ಅಧಿಕಾರಿಗಳ‌ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ವ್ಯವಸ್ಥೆ ನಿರ್ಮೂಲವಾಗಬೇಕಿದೆ, ಇದು ಒಂದು ವರ್ಗದವರ ವಿರುದ್ದ ಹೋರಾಟವಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾದ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

ಅವರು ಕುಂದಗೋಳದ ಪ್ರವಾಸಿ ಮಂದಿರದಲ್ಲಿ ಜರುಗಿದ ತಾಲೂಕ ವೀರಶೈವ ಮಹಾಸಭೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ದಾರವಾಡದಲ್ಲಿ ಫೆ.18 ರಂದು ಶುಕ್ರವಾರ ಏರ್ಪಡಿಸಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ‌ ಕೆಲವರು ಅಟ್ರಾಸಿಟಿ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುವ ನೀತಿ ಖಂಡಿಸಿ‌ ಮಾಡುವ ಸಮಾಜದ ಪ್ರತಿಭಟನೆ ಇದಾಗಿದೆ ಎಂದರು.

ಮಾಜಿ ಶಾಸಕ ಕೃಷಿ ಉತ್ಪನ್ನ ರಫ್ತು ನಿಗಮದ ಮಂಡಳಿ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ‌ ಮಾತನಾಡಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮಾಜದಲ್ಲಿ ಶಾಂತಿ ಕದಡುತ್ತಿವೆ ಎಂದರು.

ಇದೇ ವೇಳೆ ತಾಲೂಕ‌‌ ಮಹಿಳಾ ಘಟಕದ ಅದ್ಯಕ್ಷೆಯನ್ನಾಗಿ ಪಟ್ಟಣ ಪಂಚಾಯಿತಿ ಸದಸ್ಯೆ ಸುನೀತಾ ಪಾಟೀಲ ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ಸರ್ವ ಸದಸ್ಯರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

16/02/2022 10:55 pm

Cinque Terre

25.26 K

Cinque Terre

4

ಸಂಬಂಧಿತ ಸುದ್ದಿ