ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಾ.ಕಣವಿ ಆರೋಗ್ಯ ವಿಚಾರಿಸಿದ ಶಾಸಕ ಬೆಲ್ಲದ

ಧಾರವಾಡ: ನಾಡಿನ ಹೆಸರಾಂತ ಕವಿ ಡಾ.ಚೆನ್ನವೀರ ಕಣವಿ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಶಾಸಕ ಅರವಿಂದ ಬೆಲ್ಲದ ಅವರು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಭೇಟಿ ನೀಡಿದ ಅವರು, ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಕವಿ ಡಾ. ಚೆನ್ನವೀರ ಕಣವಿ ಬೇಗ ಚೇತರಿಸಿಕೊಳ್ಳಲಿ ಎಂದು ಶಾಸಕ ಅರವಿಂದ ಬೆಲ್ಲದ ಆಶಯ ವ್ಯಕ್ತಪಡಿಸಿದರು.

ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕಣವಿ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಈಗ ಎರಡ್ಮೂರು ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸಿರುವುದು ಬೇಸರದ ಸಂಗತಿಯಾಗಿದೆ. ಓರ್ವ ಕವಿಯಾಗಿ ಯಾವುದೇ ದ್ವಂದ್ವ, ಗೊಂದಲಗಳಿಲ್ಲದೇ ಸ್ಪಷ್ಟ ವಿಚಾರಧಾರೆಗಳ ಜೊತೆ ಬದುಕು ಸಾಗಿಸಿದ್ದಾರೆ ಎಂದು ಹೇಳಿದರು.

ಕಲ್ಯಾಣ ನಗರದಲ್ಲಿ ಕಣವಿ ಹಾಗೂ ಡಾ.ಎಂ.ಎಂ. ಕಲಬುರ್ಗಿ ಅವರನ್ನು‌ ಚಿಕ್ಕಂದಿನಿಂದಲೇ ನೋಡುತ್ತ ಬೆಳೆದಿದ್ದೇನೆ ಅವರು ನನ್ನ ತಂದೆ‌ ಚಂದ್ರಕಾಂತ ಬೆಲ್ಲದ ಅವರ ಜೊತೆ ನಿಕಟ ಸಂಬಂಧ ಹೊಂದಿದವರು. ಕವಿ ಮನಸ್ಸು ಮಾತ್ರವಲ್ಲದೇ ಪ್ರತಿಯೊಬ್ಬರ ಹೃದಯದಲ್ಲಿ ಉಳಿಯುವ ವ್ಯಕ್ತಿತ್ವದವರು. ಇಂತಹ ಹಿರಿಯ ‌ಕವಿಗಳು ಇನ್ನಷ್ಟು ದಿನಗಳು‌ ನಮ್ಮೊಂದಿಗೆ ಇರಲಿ ಎಂಬ ಆಸೆ ಇದೆ. ಇದು ನಾಡಿನ ಎಲ್ಲರ ಆಸೆ ಕೂಡ ಆಗಿದೆ ಎಂದು ಬೆಲ್ಲದ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

16/02/2022 08:24 am

Cinque Terre

40.46 K

Cinque Terre

1

ಸಂಬಂಧಿತ ಸುದ್ದಿ