ಹುಬ್ಬಳ್ಳಿ: ಮಹದಾಯಿ ಹೋರಾಟದ ಬಗ್ಗೆ ಈಗಾಗಲೇ ಪಕ್ಷದ ಒಳಗೆ ಚರ್ಚಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಕೆದಾಟು ಹೋರಾಟ ಮುಗಿದ ಕೂಡಲೇ ಮಹದಾಯಿಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅದರಂತೆ ಹೋರಾಟ ಮಾಡಲು ಸಿದ್ದತೆ ನಡೆಸಿದ್ದೇವೆ ಎಂದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೀರಿನ ವಿಚಾರದಲ್ಲಿ ಇಚ್ಛಾ ಶಕ್ತಿ ಇರಬೇಕು. ಈಗಾಗಲೇ ನ್ಯಾಯಾಲಯದ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ರಾಜ್ಯದ 13.42 ಪಾಲನ್ನು ಉಪಯೋಗ ಮಾಡಿಕೊಳ್ಳಲು ರಾಜ್ಯ ಸರ್ಕಾರ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭ ಮಾಡಬೇಕು. ಹಾಗಾಗಿ ಇಗಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಮಹದಾಯಿ ನೀರಿಗಾಗಿ ಪಾದಯಾತ್ರೆ ನಡೆಸಿದವರಾಗಿದ್ದು, ಅವರು ಈ ಭಾಗದ ಜನರ ಬಹುದಿನಗಳ ಕನಸಾದ ಮಹದಾಯಿ ಯೋಜನೆ ಸಾಕಾರಕ್ಕೆ ಸ್ಪಂದನೆ ನೀಡಬೇಕೆಂದು ತಿಳಿಸಿದರು.
Kshetra Samachara
14/02/2022 12:50 pm