ಧಾರವಾಡ: ದೇಶದಲ್ಲಿ ರೇಪ್ ರೇಟ್ ಹೆಚ್ಚಾಗಿದೆ. ಇದನ್ನು ನಿಲ್ಲಿಸಲು ಹಿಜಾಬ್ ಅತ್ಯವಶ್ಯಕ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಹಾಕದೇ ಇರುವುದರಿಂದ ರೇಪ್ ಹೆಚ್ಚಾಗಿವೆ ಎಂದು ನಾನು ಆ ಅರ್ಥದಲ್ಲಿ ಹೇಳಿಲ್ಲ. ಉಳಿದ ದೇಶಗಳಿಗಿಂತ ನಮ್ಮ ದೇಶದಲ್ಲಿ ರೇಪ್ ರೇಟ್ ಹೆಚ್ಚಾಗಿದೆ. ಹೀಗಾಗಿ ಅದನ್ನು ತಡೆಗಟ್ಟಲು ಹಿಜಾಬ್ ಸುರಕ್ಷಿತವಾಗಿರುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಹೆಣ್ಣು ಮಕ್ಕಳ ಸೌಂದರ್ಯವನ್ನು ಯಾರೂ ನೋಡಬಾರದು. ಮುಸ್ಲಿಂ ಧರ್ಮದಲ್ಲಿ ಐದು ಬಾರಿ ನಮಾಜ್ ಮಾಡಬೇಕು ಎಂದಿದೆ. ಆದರೆ, ಯಾರೂ ಐದು ಬಾರಿ ನಮಾಜ್ ಮಾಡುವುದಿಲ್ಲ. ಅದೇ ರೀತಿ ಮುಸ್ಲಿಂ ಮಹಿಳೆಯರು ಹಿಜಾಬ್ ಹಾಕಬೇಕು ಎಂದಿದೆ. ಕೆಲವರು ಹಾಕುತ್ತಾರೆ ಕೆಲವರು ಹಾಕುವುದಿಲ್ಲ. ಅದು ಅವರವರಿಗೆ ಬಿಟ್ಟದ್ದು. ನಾನು ನನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದರು.
ಹಿಜಾಬ್‌ನ್ನು ಈಗಿನಿಂದ ಹಾಕಿಕೊಂಡು ಬರಲಾಗುತ್ತಿಲ್ಲ. ಮೊದಲಿನಿಂದಲೂ ಈ ಪದ್ಧತಿ ಇದೆ. ಮುಸ್ಲಿಂ ಮಹಿಳೆಯರ ಸುರಕ್ಷತೆ ದೃಷ್ಠಿಯಿಂದ ಹಿಜಾಬ್ ಹಾಕಬೇಕು ಎಂದು ಹೇಳಿದ್ದೇನೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/02/2022 11:00 pm