ಹುಬ್ಬಳ್ಳಿ : ಹುಬ್ಬಳ್ಳಿ, ನವಲಗುಂದ, ಅಣ್ಣಿಗೇರಿ ತಾಲೂಕಿನಲ್ಲಿಯ ರಸ್ತೆಗಳು ಬಹುತೇಕ ಹದಗೆಟ್ಟು ಹೋಗಿವೆ. ಇದರ ಬಗ್ಗೆ ಅದೆಷ್ಟೋ ಬಾರಿ ಹೋರಾಟ ಮಾಡಿದರು ಪ್ರಯೋಜನವಾಗಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾತಾನಾಡಿ ಅವರು, ನವಲಗುಂದ ಮತ ಕ್ಷೇತ್ರ ಸೇರಿದಂತೆ ಹುಬ್ಬಳ್ಳಿ ಅಣ್ಣಿಗೇರಿ, ರಸ್ತೆ ಇಲ್ಲದೇ ರೈತರು ಜನಸಾಮಾನ್ಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಅವರು ಇದೇ ಕ್ಷೇತ್ರದಿಂದ ಆಯ್ಕೆಯಾದರು ಯಾವುದೇ ಅಭಿವೃದ್ಧಿ ಮಾಡಿಲ್ಲ. ರಸ್ತೆ ಇಲ್ಲದೆ ಜನರು ಹಾಗೂ ರೈತರು ತಮ್ಮ ಜಮೀನಿಗೆ ಹೋಗಲು ಪರದಾಡುತ್ತಿದ್ದಾರೆ.
ನಾವು ಕೂಡ ಹೋರಾಟ ಮಾಡಿ ಹಲವಾರು ರಸ್ತೆಗಳ ದುರಸ್ತಿ ಮಾಡಿಸಿದ್ದೇವೆ. ಆದರೇ ಇನ್ನೂ ಅನೇಕ ರಸ್ತೆ ದುರಸ್ತಿ ಮಾಡಬೇಕಾಗಿದೆ. ಆದ್ದರಿಂದ ಕೂಡಲೇ ನವಲಗುಂದ ಭಾಗದ ಜನರಿಗೆ ಸುಗಮ ರಸ್ತೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Kshetra Samachara
13/02/2022 02:07 pm