ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದುಗೋಳ: ದಲಿತ ಸಂಘಟನೆಗಳ ಹೋರಾಟಕ್ಕೆ ಶಾಸಕರ ಬೆಂಬಲ; ರಾಜ್ಯ ಸರ್ಕಾರದ ವಿರುದ್ಧ ಕಿಡಿ

ಕುಂದಗೋಳ: ಡಾ.ಬಿ.ಆರ್.ಅಂಬ್ಕೇಡರ್ ಅವರಿಗೆ ಅವಮಾನ ಮಾಡಿದ ರಾಯಚೂರಿನ ನ್ಯಾಯಾಧೀಶರ ವಿರುದ್ಧ ಕುಂದಗೋಳ ಪಟ್ಟಣ ಹಾಗೂ ತಾಲೂಕಿನ ದಲಿತ ಸಂಘಟನೆಗಳು ಇಂದು ಮತ್ತೆ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ತಹಶೀಲ್ದಾರ ಕಚೇರಿವರೆಗೆ ಶಾಸಕಿ ಕುಸುಮಾವತಿ ಶಿವಳ್ಳಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡರು.

ಪಟ್ಟಣದ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆಯುದ್ದಕ್ಕೂ ದಲಿತ ಸಂಘಟನೆಗಳು ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರ ಅಣುಕು ಶವಯಾತ್ರೆ ಕೈಗೊಂಡರು ಘೋಷಣೆ ಕೂಗಿದರು.

ಬಳಿಕ ತಹಶೀಲ್ದಾರ್ ಕಚೇರಿ ತಲುಪಿದ ಪ್ರತಿಭಟನೆಗೆ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಶಾಸಕ ಪ್ರಸಾದ ಅಬ್ಬಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ದಲಿತರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಸೌಲಭ್ಯಗಳಲ್ಲಿ ಆರ್ಥಿಕ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ಮುಖ್ಯವಾದ ವಿಚಾರ ಬಿಟ್ಟು ಹಿಜಾಬ್ ವಿವಾದ ಬಗ್ಗೆ ಹೆಚ್ಚು ಗಮನ ಕೊಡುತ್ತಾ ಚುನಾವಣೆ ತಂತ್ರಗಾರಿಕೆ ನಡೆಸಿದೆ' ಎಂದರು.

ಬಳಿಕ ಕುಂದಗೋಳ ಪಟ್ಟಣ ಹಾಗೂ ತಾಲೂಕಿನ ದಲಿತ ಸಂಘಟನೆಗಳ ಮೂಲಕ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ನ್ಯಾಯಾಧೀಶರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯ ಮಾಡಲಾಯಿತು.

Edited By : Nagesh Gaonkar
Kshetra Samachara

Kshetra Samachara

07/02/2022 06:43 pm

Cinque Terre

15.77 K

Cinque Terre

0

ಸಂಬಂಧಿತ ಸುದ್ದಿ