ಕಲಘಟಗಿ: ಇಂದಿನ ದಿನಮಾನಗಳಲ್ಲಿ ಮಹಿಳೆಯರು ಸರಕಾರ ನೀಡುವ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾದಲ್ಲಿ ದೇಶ ರಾಜ್ಯ ಸದೃಢವಾಗುವಲ್ಲಿ ಸಂದೇಹವಿಲ್ಲ ಎಂದು ಶಾಸಕ ಸಿ.ಎಂ ನಿಂಬಣ್ಣವರ ಮಾತನಾಡಿದರು.
ಅವರು ಪಟ್ಟಣದ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಿದ ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ, ಇಲಾಖೆ ದೀನದಯಾಳ ಅಂತ್ಯೋದಯ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡಿ ಸ್ವ ಸಹಾಯ ಸಂಘಗಳ ಸದಸ್ಯರುಗಳಿಗೆ ಎರಡು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯ ಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರು ಆರ್ಥಿಕವಾಗಿ ಬೆಳವಣಿಗೆ ಕಂಡುಕೊಳ್ಳಬೇಕು ಸಂಘಟಿತ ರಾಗಬೇಕು ಹೆಚ್ಚು ಹೆಚ್ಚು ಸ್ವಾವಲಂಬಿ ಯಾಗ ಬೇಕು ಅಂದರೆ ಮಾತ್ರ ಸರಕಾರದ ಯೋಜನೆ ಸಫಲವಾದಂತೆ ಎಂದರು.
ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡ್ರ ಮಾತನಾಡಿ ದಿ.4ಮತ್ತು 5ರ ಫೆಬ್ರುವರಿ ರಂದು ಎರಡು ದಿನಸ ತರಬೇತಿ ನೀಡಲಾಗುವುದು ತರಬೇತಿ ಯನ್ನು ಎಸ್.ಎಂ ಮುಲ್ಲಾ ಹಾಗೂ ಕೆ.ಬಿ.ಕಟ್ಟಿಮನಿ ನೀಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅನುಸೂಯ ಹೆಬ್ಬಳ್ಳಿ ಮಠ ಉಪಾಧ್ಯಕ್ಷರಾದ ಎಲ್ಲವ್ವ ಶಿಗ್ಲಿ ಸಾಯಿ ಸಮಿತಿ ಅಧ್ಯಕ್ಷರಾದ ಗಂಗಪ್ಪ ಗೌಳಿ ಪ.ಪಂ ಸದಸ್ಯರಾದ ನಿಂಗಪ್ಪ ಹರಪ್ಪನಳ್ಳಿ. ಮಾಲಾ ಲಮಾಣಿ ಲಕ್ಷ್ಮಣ್ ಬೆಟಿಗೇರಿ ಸುನಿಲ್ ಗಬ್ಬೂರ್ ವೃಷಭೇಂದ್ರ ಪಟ್ಟಣಶೆಟ್ಟಿ ನಾಮನಿರ್ದೇಶಿತ ರಾಕೇಶ್ ಅಳಗೋಡಿ ಮಂಜುಳಾ ನಾಯಕ್ ಪಟ್ಟಣ ಪಂಚಾಯತಿ ಸಿಬ್ಬಂದಿಯಾದ ಶರಣಪ್ಪ ಉಣಕಲ್ ಇದ್ದರು.
Kshetra Samachara
04/02/2022 04:06 pm