ಹುಬ್ಬಳ್ಳಿ: ನಿನ್ನೆ ದಿನದಂದು ಎಐಎಂಐಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಬ್ಯಾರೀಸ್ಟರ್ ಆಸದುದ್ದಿನ್ ಒವೈಸಿ ಅವರ ಮೇಲೆ ದಾಳಿ ಮಾಡಿದ ಕಿಡಗೆಡಿಗಳ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಎಐಎಂಐಎಂ ಪಕ್ಷದ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ತಡರಾತ್ರಿ ಪ್ರತಿಭಟನೆ ಮಾಡುತ್ತ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಈ ಸಂಧರ್ಭದಲ್ಲಿ ಎಐಎಂಐಎಂ ರಾಜ್ಯಾಧ್ಯಕ್ಷ ರಾಜೇಶ್ ಬಸವರಾಜ, ಧಾರವಡ ಜಿಲ್ಲಾ ಅಧ್ಯಕ್ಷ ನಜೀರ್ ಅಹ್ಮದ್ ಹೊನ್ಯಾಳ, ಶಫಖತ ಅಲಿ ಬಡಿಗೆರ್, ಹುಬ್ಬಳ್ಳಿ ಶಹರ ಅಧ್ಯಕ್ಷ ದಾದಾಪೀರ್ ಬೆಟ್ಗೆರಿ, ವಿಜಯ ಗುಂಟ್ರಾಳ, ದಾದಾಪೀರ್ ಕಾಲ್ಗೆ, ಇರ್ಫಾನ್ ನಾಲವತ್ವಾಡ್, ಅಜರುದ್ದೀನ್, ಮೈನೂದ್ದಿನ್ ನಾಲ್ಬಂದ್, ಪಕ್ಷದ ಯುವಕರು ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.
Kshetra Samachara
04/02/2022 01:39 pm