ಹುಬ್ಬಳ್ಳಿ: ನರಗುಂದ ತಾಲೂಕಿನಲ್ಲಿ ನಡೆದ ಸಮೀರ್ ಶಹಾಪುರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸರ್ಕಾರ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಹುತ್ವ ಕರ್ನಾಟಕ ಸಂಘಟನೆ ಕಾರ್ಯಕರ್ತ ಶಬ್ಬೀರ್ ಅಹ್ಮದ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ಜ.16ರಂದು ಗಲಾಟೆ ಆದಾಗ ಸಂಜು ನಾಲವಾಡ ಎಂಬಾತನನ್ನು ಬಂಧಿಸಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಆದರೆ ಪೊಲೀಸರ ನಿರ್ಲಕ್ಷ್ಯದಿಂದ ಸಮೀರ ಹತ್ಯೆಯಾಗಿದೆ. ಕೊಲೆ ಬಳಿಕ ಯಾವ ಜನಪ್ರತಿನಿಧಿಯೂ ಮೃತರ ಕುಟುಂಬಕ್ಕೆ ಭೇಟಿ ನೀಡಿ ಕನಿಷ್ಠ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಪರಿಹಾರ ಘೋಷಿಸಿಲ್ಲ' ಎಂದು ದೂರಿದರು.
ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಮೃತ ಸಮೀರ್ ಅವನದ್ದು ಬಡ ಕುಟುಂಬವಾಗಿದ್ದು ಅವರಿಗೆ ಆಸರೆಯಾಗುವ ಕಾರ್ಯ ಆಗಬೇಕು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸರ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
Kshetra Samachara
28/01/2022 01:33 pm