ಕುಂದಗೋಳ : ಪಟ್ಟಣದ ಮಸಾರಿ ಪ್ಲಾಟ್ ಹಾಗೂ ಅಂಬೇಡ್ಕರ್ ನಗರಕ್ಕೆ ಶಾಸಕಿ ಕುಸುಮಾವತಿ ಶಿವಳ್ಳಿ ಬೇಟಿ ನೀಡಿ ಸ್ಥಳೀಯ ನಿವಾಸಿಗಳಿಗೆ ಮನೆ ಮಂಜೂರಾತಿ ಬಗ್ಗೆ ಜನರು ಜೊತೆ ಸಮಾಲೋಚನೆ ನಡೆಸಿ ಅವರ ಅಹವಾಲು ಸ್ವೀಕರಿಸಿದರು.
ಸ್ಲಂ ಬೋರ್ಡ್ ನಿಗಮ ಮಂಡಳಿ ವತಿಯಿಂದ ಕುಂದಗೋಳ ಪಟ್ಟಣದ ಮಸಾರಿ ಪ್ಲಾಟ್ ಹಾಗೂ ಅಂಬೇಡ್ಕರ್ ನಗರದ ನಿವಾಸಿಗಳಿಗೆ ಮನೆ ಮಂಜೂರಾಗಿದ್ದು, ಆ ಮನೆಗಳ ಹಂಚಿಕೆ ವಿಚಾರವಾಗಿ ಸ್ವತಃ ಶಾಸಕಿ ಕುಸುಮಾವತಿ ಶಿವಳ್ಳಿ ಅರ್ಹ ಫಲಾನುಭವಿಗಳನ್ನು ಅವರವರ ವಾಸಿಸುವ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿದರು.
ಬಳಿಕ ಸಾರ್ವಜನಿಕರು ಜೊತೆ ಮಾತನಾಡಿದ ಅವರು ಎಲ್ಲರೂ ಸೌಲಭ್ಯಕ್ಕಾಗಿ ಬರಬೇಡಿ ಬಡವರು ನಿವಾಸ ಇಲ್ಲದವರು ಬನ್ನಿ ಎಂದು ಖಡಕ್ ಆಗಿ ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಕೋಕಾಟೆ, ಮುಖ್ಯಾಧಿಕಾರಿ ರಮೇಶ್ ಗೋಂದಕರ್ ಉಪಸ್ಥಿತರಿದ್ದರು.
Kshetra Samachara
20/01/2022 01:31 pm